ಬಿಬಿಸಿ ಕ್ಷಮೆ ಕೇಳಿದ್ಯಾಕೆ?

masthmagaa.com:

1995ರಲ್ಲಿ ಬಿಬಿಸಿ ಪತ್ರಕರ್ತ ಮಾರ್ಟಿನ್ ಬಶೀರ್ ನಡೆಸಿದ್ದ​ ಬ್ರಿಟನ್ ರಾಜಕುಮಾರಿ ಡಯಾನ ಇಂಟರ್​​ವ್ಯೂ ಕುರಿತು ಬಿಬಿಸಿ ಬೇಷರತ್ ಆಗಿ ಕ್ಷಮೆಯಾಚಿಸಿದೆ. ಮಾರ್ಟಿನ್ ಬಶೀರ್​​ ಮೋಸದಿಂದ ಡಯಾನ ಇಂಟರ್​ವ್ಯೂ ಪಡೆದುಕೊಂಡಿದ್ರು. ಸಾಮಾಜಿಕ ಕಾರ್ಯಗಳ ಬಗ್ಗೆ ಇಂಟರ್​​ವ್ಯೂ ನಡೆಸೋದಾಗಿ ಹೇಳಿ, ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿಸುತ್ತಾ ಸಾಗಿದ್ರು. ಈ ವೇಳೆ ತನ್ನ ಪತಿ, ರಾಜಕುಮಾರ ಚಾರ್ಲ್ಸ್​​​​​ ವಿವಾಹೇತರ ಸಂಬಂಧದ ಕುರಿತು ಸ್ಫೋಟಕ ಹೇಳಿಕೆಗಳನ್ನು ನೀಡಿದ್ರು. ಇದಾದ ಒಂದೇ ವರ್ಷದಲ್ಲಿ ಚಾರ್ಲ್ಸ್​​ ಮತ್ತು ಡಯಾನಾ ನಡುವೆ ಡಿವೋರ್ಸ್​ ಆಗಿತ್ತು. ನಂತರ ಕಾರು ಅಪಘಾತದಲ್ಲಿ ಡಯಾನಾ ಸಾವನ್ನಪ್ಪಿದ್ರು. ನಂತರದಲ್ಲಿ ಮಾರ್ಟಿನ್ ಬಶೀರ್ ಮೋಸದ ಮೂಲಕ ಈ ಇಂಟರ್​ವ್ಯೂ ಪಡೆದುಕೊಂಡಿದ್ಧಾರೆ ಅಂತ ಆರೋಪ ಕೇಳಿ ಬಂದಿತ್ತು. ಆಗ ಬಿಬಿಸಿ ಸಿಬ್ಬಂದಿಯಾಗಿದ್ದ ಟೋನಿ ಹಾಲ್ ಮತ್ತು ಅನ್ನೆ ಸ್ಲೋಮನ್ ಮಾರ್ಟಿನ್ ಬಶೀರ್​​ಗೆ ಕ್ಲೀನ್ ಚಿಟ್ ನೀಡಿತ್ತು. ನಂತರ ನಿವೃತ್ತ ಜಡ್ಜ್​ ಜಾನ್ ಡೈಸನ್ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಲಾಯ್ತು. ಇದ್ರಲ್ಲಿ ಮಾರ್ಟಿನ್ ಬಶೀರ್ ಮೋಸದಿಂದ ಇಂಟರ್​ವ್ಯೂ ಪಡೆದುಕೊಂಡಿದ್ದು ಸಾಬೀತಾಗಿದೆ. ಹೀಗಾಗಿ 25 ವರ್ಷಗಳ ಬಳಿಕ ಬಿಬಿಸಿ ಕ್ಷಮೆಯಾಚಿಸಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಡಯಾನ ಪುತ್ರ ಪ್ರಿನ್ಸ್ ಹ್ಯಾರಿ, ಆ ಒಂದು ಇಂಟರ್​​ವ್ಯೂ ತನ್ನ ತಂದೆ-ತಾಯಿ ದೂರವಾಗಲು ಪ್ರಮುಖ ಕಾರಣವಾಯಿತು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply