ಗಂಡನ ಜೊತೆ ಆಟೋರಿಕ್ಷಾದಲ್ಲಿ ಪ್ರಿಯಾಂಕಾ ಚೋಪ್ರ ಫೋಟೋಶೂಟ್!

masthmagaa.com:

ಮುಂಬೈಯಲ್ಲಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMCC) ಅನ್ನು ಮೊನ್ನೆಯಷ್ಟೇ ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಈ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅದರಲ್ಲೂ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ ಜೊತೆಗೆ ಇಲ್ಲಿಗೆ ಬಂದಿದ್ದು ಮತ್ತು ಪ್ರಿಯಾಂಕಾ ಅವರು 2015 ರ ಹಿಟ್ ಚಿತ್ರ ‘ದಿಲ್ ಧಡಕ್ನೆ ದೋ’ ಚಿತ್ರದ ಗ್ಯಾಲನ್ ಗೂಡಿಯಾ ಹಾಡಿಗೆ ಡ್ಯಾನ್ಸ್ ಮಾಡಿದ್ದು ಎಲ್ಲರಿಗೂ ಖುಷಿ ಕೊಟ್ಟಿತು.

ಈ ಎರಡು ದಿನಗಳ ಕಾರ್ಯಕ್ರಮದ ನಂತರ ನಟಿ ಪ್ರಿಯಾಂಕಾ ಮತ್ತು ನಿಕ್ ಇಬ್ಬರು ಮುಂಬೈ ನಲ್ಲಿ ನೈಟ್ ಔಟ್‌ ಹೋಗಿದ್ದಾರೆ. ಅಲ್ಲಿ ತೆಗೆದುಕೊಂಡ ಫೋಟೋಗಳನ್ನ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೈಟ್ ನಡೆದ ಫೋಟೋ ಸೆಷನ್ ನಲ್ಲಿ ನಟಿ ಪ್ರಿಯಾಂಕಾ ಮತ್ತು ಪತಿ ನಿಕ್ ಮುಂಬೈನ ಬೀದಿಗಳಲ್ಲಿ ಆಟೋರಿಕ್ಷಾ ಬಳಿ ನಿಂತು ಪೋಸ್ ನೀಡಿ ಸಂಭ್ರಮಿಸಿದ್ದಾರೆ.‌

ಪ್ರಿಯಾಂಕಾ ತನ್ನ ಸೋಶಿಯಲ್​ ಮೀಡಿಯಾದ ಪೋಸ್ಟ್ ನಲ್ಲಿ, “ನಿಮ್ಮ ಅದ್ಭುತ ಸಹಯೋಗಕ್ಕಾಗಿ ಎಂದಿನಂತೆ ಸ್ಟೈಲ್‌ಬ್ಯಾಮಿಗೆ ಧನ್ಯವಾದಗಳು. ಆಧುನಿಕ ಟಚ್ ಇರುವ ಹಳೆಯ ಶೈಲಿಯ ಬಟ್ಟೆಯನ್ನು ಹಾಕುತ್ತೇನೆ ಅಂತ ನನಗೆ ತಿಳಿದಿತ್ತು. ಭಾರತೀಯ ಕಲೆ ಮತ್ತು ಫ್ಯಾಷನ್ ಅನ್ನು ತೋರಿಸುವ ಈ ಸುಂದರವಾದ ಡಿಸೈನ್ ಅನ್ನು ಮಾಡಿದ್ದಕ್ಕಾಗಿ ಅಮಿತ್ ಅಗರ್ವಾಲ್ ಅವರಿಗೆ ತುಂಬಾನೇ ಥ್ಯಾಂಕ್ಸ್ . ಈ ಸುಂದರವಾದ ಬಟ್ಟೆಯನ್ನ 65 ವರ್ಷ ಹಳೆಯ ವಿಂಟೇಜ್ ಬನಾರಸಿ ಪಟೋಲಾ ಸೀರೆಯೊಂದಿಗೆ ಸಿಲ್ವರ್ ಥ್ರೆಡ್ ಮತ್ತು ಖಾದಿ ರೇಷ್ಮೆಯ ಮೇಲೆ ಗೋಲ್ಡ್ ಎಲೆಕ್ಟ್ರೋಪ್ಲೇಟಿಂಗ್ ಬಳಸಿ ಮಾಡಲಾಗಿದೆ. ನಿಮ್ಮ ಪ್ರತಿಭೆಗೆ ಮತ್ತು ನಿಮ್ಮ ಪ್ರತಿಭಾನ್ವಿತ ತಂಡಕ್ಕೆ ಧನ್ಯವಾದಗಳು ಅಮಿತ್.

ಈ ಕಾರ್ಯಕ್ರಮಕ್ಕೆ ತನ್ನನ್ನು ಮತ್ತು ತನ್ನ ಪತಿಯನ್ನು ಆಹ್ವಾನಿಸಿದ್ದಕ್ಕಾಗಿ ನೀತಾ ಅಂಬಾನಿ ಅವರಿಗೆ ಧನ್ಯವಾದ. ಇತಿಹಾಸದಲ್ಲಿ ಭಾರತೀಯ ಫ್ಯಾಷನ್ ನ ಅದ್ಭುತ ಪ್ರದರ್ಶನವನ್ನು ರಚಿಸಿದ್ದಕ್ಕಾಗಿ ನೀತಾ ಮುಖೇಶ್‌ ಅಂಬಾನಿ ಅವರಿಗೆ ಅಭಿನಂದನೆಗಳು. ಈ ಸೊಗಸಾದ ಸ್ಥಳ ಮತ್ತು ಭಾರತೀಯ ಕಲೆ, ವಿನ್ಯಾಸವನ್ನು ಉತ್ತೇಜಿಸುವ ಸಾಮರ್ಥ್ಯದ ಬಗ್ಗೆ ನಾನು ತುಂಬಾನೇ ಹೆಮ್ಮೆ ಪಡುತ್ತೇನೆ. ಕೊನೆಯದಾಗಿ ಆಟೋ ಅಂಕಲ್‌ ನಿಮ್ಮ ಪ್ರೀತಿಗೆ ಧನ್ಯವಾದಗಳುʼʼ ಎಂದು ತಮಗೆ ಪ್ರೀತಿ ವಿಶ್ವಾಸ ತೋರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply