ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಗಳೊಂದಿಗೆ ಪ್ರಿಯಾಂಕಾ ಚೋಪ್ರಾ!

masthmagaa.com:

ಪ್ರಿಯಾಂಕಾ ಚೋಪ್ರಾ ಅವರು ಗುರುವಾರ ತಮ್ಮ ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರೊಂದಿಗೆ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪ್ರಿಯಾಂಕ ತನ್ನ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೆರಿಯೊಂದಿಗೆ ಕಳೆದ ವಾರ ಮುಂಬೈಗೆ ಬಂದಿದ್ದರು. ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಭಾರತಕ್ಕೆ ಆಗಮಿಸಿದ್ದರು. ಮುಂಬೈನ ಸಿದ್ಧಿವಿನಾಯಕ ಟೆಂಪಲ್‌ಗೆ ಮೊದಲ ಬಾರಿ ಮಗಳ ಜೊತೆ ಪೂಜೆ ಸಲ್ಲಿಸಿದಾರೆ. ಮಾಲ್ತಿ ಜೊತೆಗಿನ ದೇವಸ್ಥಾನದ ವಿಡಿಯೋ ಈಗ ಎಲ್ಲಡೆ ವೈರಲ್‌ ಆಗ್ತಾ ಇದೆ.

ವೀಡಿಯೊದಲ್ಲಿ, ಪ್ರಿಯಾಂಕಾ ಮತ್ತು ಅವರ ಮಗಳು ಪೂಜಾರಿ ಪೂಜೆ ಮಾಡುವಾಗ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ನೋಡಬಹುದು. ಪ್ರಿಯಾಂಕಾ ಅವರು ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಪೋಟೊಗಳನ್ನ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಜೊತೆಗೆ “MM (ಮಾಲ್ತಿ ಮೇರಿ) ಮೊದಲ ಭಾರತ ಪ್ರವಾಸ ಸಿದ್ಧಿವಿನಾಯಕನ ಆಶೀರ್ವಾದೊಂದಿಗೆ ಕಂಪ್ಲೀಟ್‌ ಆಗಿದೆ” ಎಂದು ಟೈಟಲ್‌ ಕೂಡ ನೀಡಿದ್ದಾರೆ.

ಇನ್ನೂ ಕಳೆದ ವರ್ಷ ಪ್ರಿಯಾಂಕಾ ಮತ್ತು ನಿಕ್‌ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನ ಪಡೆದಿದ್ದರು. ಈ ವರ್ಷದ ಆರಂಭದಲ್ಲಿ, ಹಾಲಿವುಡ್ ವಾಕ್ ಆಫ್ ಫೇಮ್ ಈವೆಂಟ್‌ನಲ್ಲಿ ಅವರು ತಮ್ಮ ಮಗಳ ಮುಖವನ್ನ ಮೊದಲ ಬಾರಿಗೆ ಎಲ್ಲರಿಗೂ ಪರಿಚಯಿಸಿದ್ದರು.

-masthmagaa.com

Contact Us for Advertisement

Leave a Reply