ಮಂಗಳಸೂತ್ರ ವಿಚಾರ: ಮೋದಿ ವಿರುದ್ದ ಗುಡುಗಿದ ಪ್ರಿಯಂಕಾ ಗಾಂಧಿ!

masthmagaa.com:

ಕಾಂಗ್ರೆಸ್‌ ಆಡಳಿತದಲ್ಲಿ ಮಹಿಳೆಯರ ಮಂಗಳಸೂತ್ರ ಸೇಫ್‌ ಅಲ್ಲ ಅಂತ ಮೋದಿಯವರ ಹೇಳಿಕೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಂಕಾ ಗಾಂಧಿ ರಿಯಾಕ್ಟ್ ಮಾಡಿದ್ದಾರೆ. ನನ್ನ ತಾಯಿ ತನ್ನ ಮಂಗಳಸೂತ್ರವನ್ನ ಈ ದೇಶಕ್ಕೆ ಅರ್ಪಿಸಿದ್ದಾರೆ. ಯುದ್ದದ ಟೈಮ್‌ನಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಕೂಡ ತನ್ನಲ್ಲಿದ್ದ ಚಿನ್ನವನ್ನ ದೇಶಕ್ಕೆ ಕೊಟ್ಟಿದ್ದಾರೆ. ಸ್ವಾತಂತ್ರ ಸಿಕ್ಕ 75 ವರ್ಷಗಳಲ್ಲಿ ಕಾಂಗ್ರೆಸ್ಸೆ 55 ವರ್ಷ ಆಡಳಿತ ನಡೆಸ್ತಿದೆ. ಈ ವೇಳೆ ನಿಮ್ಮ ಮಂಗಳಸೂತ್ರವನ್ನ ಅಥ್ವಾ ನಿಮ್ಮ ಚಿನ್ನವನ್ನ ಕಾಂಗ್ರೆಸ್ ಯಾವತ್ತಾದ್ರೂ ಕಸಿದುಕೊ‍‍‍‍‍ಳ್ಳೊ ಪ್ರಯತ್ನ ಮಾಡಿದಿಯಾ? ಅಂತ ಸಾರ್ವಜನಿಕರನ್ನ ಪ್ರಶ್ನೆ ಮಾಡಿದ್ದಾರೆ. ಅಲ್ದೇ ಮೋದಿ ಅವ್ರು ಮಂಗಳಸೂತ್ರದ ಮಹತ್ವವನ್ನ ತಿಳಿದಿದ್ರೆ ಇಂತಹ ಅನೈತಿಕ ವಿಷಯಗಳನ್ನ ಮಾತಾಡ್ತಿರಲಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply