ಶತ್ರುವಿನ ಶತ್ರು ಮಿತ್ರ! ಈಗ ಚೀನಾ, ರಷ್ಯಾ ಭಾಯಿ ಭಾಯಿ!

masthmagaa.com:

ಒಂದ್ಕಡೆ ಅಮೆರಿಕ, ಮಿತ್ರರಾಷ್ಟ್ರಗಳು ಮತ್ತು ಚೀನಾ ಜೊತೆಗಿನ ಸಂಬಂಧ ದಿನದಿಂದ ದಿನಕ್ಕೆ ಹಳಸ್ತಿದ್ರೆ, ಮತ್ತೊಂದ್ಕಡೆ ಶತ್ರುವಿನ ಶತ್ರು ಮಿತ್ರ ಅನ್ನೋ ರೀತಿ ಚೀನಾ, ರಷ್ಯಾ ಹತ್ತಿರವಾಗ್ತಿವೆ. ಚೀನಾ ಮತ್ತು ರಷ್ಯಾ ವಾಯುಪಡೆ ಏಷ್ಯಾ, ಪೆಸಿಫಿಕ್ ವಲಯದಲ್ಲಿ ಜಂಟಿಯಾಗಿ ಗಸ್ತು ತಿರುಗಿವೆ. ಕಳೆದ ಕೆಲವು ತಿಂಗಳಲ್ಲಿ ಚೀನಾ, ರಷ್ಯಾ ನಡುವೆ ನಡೀತಿರೋ ಮೂರನೇ ಡ್ರಿಲ್ ಇದಾಗಿದೆ. ಚೀನಾದ ಎರಡು ಹೆಚ್​​​​​-6ಕೆ ಬಾಂಬರ್ಸ್​ ಮತ್ತು ರಷ್ಯಾದ ಎರಡು ಟಿಯು-95 ಎಂಸಿ ವಿಮಾನಗಳು ಪಶ್ಚಿಮ ಪೆಸಿಫಿಕ್​​ನ ಜಪಾನ್ ಸಾಗರ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಹಾರಾಟ ನಡೆಸಿವೆ. ಈ ವೇಳೆ ಉಭಯದೇಶಗಳ ವಿಮಾನಗಳು ಅಂತಾರಾಷ್ಟ್ರೀಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು, ಯಾವುದೇ ದೇಶಗಳ ಏರ್​ಸ್ಪೇಸ್​​​ ಪ್ರವೇಶಿಸಲಿಲ್ಲ ಅಂತ ಮಿಲಿಟರಿ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply