ಲೈಂಗಿಕ ದೌರ್ಜನ್ಯ ಕೇಸಲ್ಲಿ ಬ್ರಿಟನ್‌ ರಾಣಿ ಸಂಬಂಧಿ ಆರೆಸ್ಟ್!

masthmagaa.com:

2ನೇ ಕ್ವೀನ್ ಎಲಿಜಬೆತ್ ಅವರ ಸಂಬಂಧಿಕ, ಸ್ಕಾಟ್​​ಲ್ಯಾಂಡ್​​​ನ ಸ್ಟ್ರಾಟ್​​​‌ಮೋರ್​​​ನ ರಾಜ ಸೈಮನ್ ಬೋವೆಸ್-ಲಿಯಾನ್​​​​ಗೆ 10 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಬ್ರಿಟನ್ ರಾಣಿಯ ಕಸಿನ್​​​ನ ಮಗನಾಗಿರುವ ಈತನ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿತ್ತು. 2020ರಲ್ಲಿ ಬ್ರಿಟಿಷ್ ಮಹಾರಾಣಿಯ ತಾಯಿಯ ಮನೆಯಾದ ಗ್ಲೆಮಿಸ್ ಕಾಸಲ್​​ನಲ್ಲಿ ಒಂದು ಕಾರ್ಯಕ್ರಮ ನಡೆದಿತ್ತು.

ಈ ವೇಳೆ ಕೋಣೆಯೊಂದರಲ್ಲಿ ಮಲಗಿದ್ದ ಮಹಿಳೆಯ ಮೇಲೆ ಈ 34 ವರ್ಷದ ಸೈಮನ್ ಬೋವೆಸ್ ಲಿಯಾನ್ ದೌರ್ಜನ್ಯ ಎಸಗಿದ್ದ. ಡುಂಡೀ ಶೆರಿಫ್ ಕೋರ್ಟ್​​ ಇದೀಗ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಕಳೆದ ತಿಂಗಳಷ್ಟೇ ತಪ್ಪು ಒಪ್ಪಿಕೊಂಡಿದ್ದ ಸೈಮನ್, ನನ್ನ ಮನೆಗೆ ಬಂದ ಅತಿಥಿಗೆ ಇಂತಾ ತೊಂದ್ರೆಯಾಗಿರೋದಕ್ಕೆ ನನಗೆ ಬೇಸರವಾಗಿದೆ. ನಾಚಿಕೆಯಾಗ್ತಿದೆ. ಆ ದಿನ ನಾನು ಕುಡಿದಿದ್ದರಿಂದ ಹೀಗೆಲ್ಲಾ ಆಗಿದೆ ಅಂತ ಹೇಳಿಕೊಂಡಿದ್ದರು.

-masthmagaa.com

Contact Us for Advertisement

Leave a Reply