ಮಗಳು ಐರಾ ಜೊತೆ ಪೋಟೋ ಕ್ಲಿಕ್ಕಿಸಲು ಪರದಾಡುತ್ತಿರುವ ರಾಧಿಕಾ ಪಂಡಿತ್‌ !

masthmagaa.com:

ನಟಿ ರಾಧಿಕಾ ಪಂಡಿತ್‌ ಅವರು ಮಗಳೊಂದಿಗಿನ ವಿಶೇಷ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಪೋಟೋಗಳು ಮಗಳು ಐರಾ ಚೇಷ್ಟೆಗಳನ್ನು ಮುದ್ದು ಮುದ್ದಾಗಿ ತೋರಿಸುತ್ತಿವೆ.

ರಾಧಿಕಾ ಪಂಡಿತ್‌ ಅವರು ಆಗಾಗ ತಮ್ಮ ಕುಟುಂಬದೊಂದಿಗಿನ ಪೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಈ ಬಾರಿ ರಾಧಿಕಾ ಪಂಡಿತ್‌ ಅವರು ಹಂಚಿಕೊಂಡ ಪೋಟೋಗಳು , ಅವರು ಮಗಳೊಂದಿಗೆ ಪೋಟೋ ಕ್ಲಿಕ್ಕಿಸಲು ಎಷ್ಟು ಶ್ರಮ ಪಡಬೇಕು ಎನ್ನುವುದನ್ನು ಬಿಂಬಿಸುತ್ತಿವೆ. ಮಗಳೊಂದಿಗೆ ಪೋಟೋ ಕ್ಲಿಕ್ಕಿಸಬೇಕು ಅಂತ ರಾಧಿಕಾ ಪಂಡಿತ್‌ ಅವಳನ್ನು ಕ್ಯಾಮರಾ ಕಡೆ ನೋಡುವಂತೆ ಹೇಳುತ್ತಿದ್ದಾರೆ. ಆದ್ರೆ ಅವಳು ಮಾತ್ರ ಸರಿಯಾಗಿ ಪೋಸ್‌ ನೀಡದೆ ವಿಚಿತ್ರವಾಗಿ ಮುಖಭಾವಗಳನ್ನು ತೋರಿಸುತ್ತಿದ್ದಾಳೆ. ಅದ್ರಲ್ಲೂ ಐರಾ ಸಖತ್‌ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾಳೆ.

ಹಿಂದೊಮ್ಮೆ ರಾಧಿಕಾ ಪಂಡಿತ್‌ ಅವರು ಯಶ್‌ ಅವರೊಂದಿಗಿನ ಪೋಟೋ ಶೇರ್‌ ಮಾಡಿಕೊಂಡಿದ್ದರು. ಅದರಲ್ಲಿ ಯಶ್‌ ಅವರು ಕೂಡ ಐರಾ ಅಂತೆಯೇ ಪೋಟೋ ಪೋಸ್‌ ನೀಡಲು ಸತಾಯಿಸುತ್ತಿದ್ದರು.

-masthmagaa.com

Contact Us for Advertisement

Leave a Reply