ಪಾಕ್​​​​ನಿಂದ ಬಂದ ಅಪಾಯಕಾರಿ ವಸ್ತುಗಳಿರೋ ಕಂಟೈನರ್ ಸೀಜ್!

masthmagaa.com:

ಅದಾನಿ ಪೋರ್ಟ್​​ನಲ್ಲಿ ಪಾಕಿಸ್ತಾನದ ಹಡಗಿನಿಂದ ಅಪಾಯಕಾರಿ ವಸ್ತುಗಳಿರೋ ಕಂಟೈನರ್​​ಗಳನ್ನು ಸೀಜ್​ ಮಾಡಲಾಗಿದೆ. ನವೆಂಬರ್ 18ರಂದು ಈ ಘಟನೆ ನಡೆದಿದ್ದು, ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ಮುಂದ್ರಾ ಬಂದರು ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಕರಾಚಿಯಿಂದ ಶಾಂಘೈಗೆ ಒಂದು ಹಡಗು ಹೊರಟಿತ್ತು. ಇದ್ರಲ್ಲಿ ಹಲವು ಕಂಟೈನರ್​ಗಳಿದ್ವು. ಇವ್ಯಾವುದೂ ಮುಂದ್ರಾ ಬಂದರಿಗೆ ಆಗಲೀ ಅಥವಾ ಭಾರತದ ಯಾವುದೇ ಬಂದರಿಗಾಗಲೀ ಕಳುಹಿಸರಲಿಲ್ಲ. ಬದಲಾಗಿ ಎಲ್ಲವನ್ನೂ ಚೀನಾದ ಶಾಂಘೈ ಬಂದರಿಗೆ ಕಳುಹಿಸಲಾಗಿತ್ತು. ಹೀಗೆ ಹೋಗುವಾಗ ಹಡಗು ಮುಂದ್ರಾ ಬಂದರಿನ ಬಳಿ ಬಂದಾಗ ಕಸ್ಟಮ್ಸ್​ ಮತ್ತು ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್​ ಅಧಿಕಾರಿಗಳು ಕಂಟೈನರ್​​ಗಳ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಅದ್ರಲ್ಲಿ ಅಂಥದ್ದೇನಿಲ್ಲ.. ಅಪಾಯಕಾರಿ ವಸ್ತುಗಳೇನೂ ಇಲ್ಲ ಬಿಡಿ ಅಂತ ಹಡಗಿನಲ್ಲಿದ್ದ ಸಿಬ್ಬಂದಿ ಹೇಳಿದ್ದಾರೆ. ಆದ್ರೂ ಪಾಕಿಸ್ತಾನದಿಂದ ಬಂದಿದ್ದಲ್ವಾ ಅನ್ನೋ ಕಾರಣಕ್ಕೆ ಅಧಿಕಾರಿಗಳು ಚೆಕ್ ಮಾಡಿದ್ದಾರೆ. ಆಗ ಅದ್ರಲ್ಲಿ ಕ್ಲಾಸ್​ 7 ಹಂತದ ಅಪಾಯಕಾರಿ ವಸ್ತುಗಳಿರೋದು ಗೊತ್ತಾಗಿದೆ. ಅವುಗಳಲ್ಲಿ ರೇಡಿಯೋ ಆಕ್ಟೀವ್ ವಸ್ತುಗಳಿರಬಹುದು ಅಂತ ಅಧಿಕಾರಿಗಳು ಅವುಗಳನ್ನು ಸೀಜ್ ಮಾಡಿದ್ದಾರೆ ಅಂತ ಅದಾನಿ ಪೋರ್ಟ್​ ಹೇಳಿದೆ. ಜೊತೆಗೆ ಅಧಿಕಾರಿಗಳ ಕರ್ತವ್ಯಪ್ರಜ್ಞೆಗೆ ನಮ್ಮದೊಂದು ಸೆಲ್ಯೂಟ್​. ಅವರಿಗೆ ಬಂದರು ಕಡೆಯಿಂದ ಯಾವುದೇ ಸಹಾಯ ಬೇಕಿದ್ರೂ ಮಾಡ್ತೀವಿ. ಅದಾನಿ ಗ್ರೂಪ್​​​​ ದೇಶದ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುತ್ತೆ. ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗೋದಿಲ್ಲ ಅಂತ ಹೇಳಿದೆ. ಅಂದಹಾಗೆ ಅದಾನಿ ಬಂದರಿನಲ್ಲಿ ಸೆಪ್ಟೆಂಬರ್​​ 13ರಂದು 3 ಸಾವಿರ ಕೆಜಿಯಷ್ಟು ಮಾದಕ ವಸ್ತು ಜಪ್ತಿ ಮಾಡಲಾಗಿತ್ತು. ಈ ಬಗ್ಗೆ ಹಲವಾರು ರೀತಿಯ ಆರೋಪಗಳು ಕೂಡ ಕೇಳಿ ಬಂದಿದ್ವು.

-masthmagaa.com

Contact Us for Advertisement

Leave a Reply