ಅಪ್ಪು ನೆನಪಿನಲ್ಲಿ ಹಚ್ಚೆ ಹಾಕಿಸಿಕೊಂಡ ರಾಘಣ್ಣ !

mastmagaa.com:

ರಾಘವೇಂದ್ರ ರಾಜ್‌ಕುಮಾರ್‌ ಅವರು ಅಪ್ಪು ನೆನಪಲ್ಲಿ ತಮ್ಮ ಎದೆ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಾರೆ. ಅಪ್ಪು ನಮ್ಮನ್ನೆಲ್ಲಾ ಅಗಲಿ ವರ್ಷಗಳೇ ಕಳೆದ್ರೂ ಕೂಡ ಅಪ್ಪು ನೆನಪು ಮಾತ್ರ ಅಮರ. ಅಪ್ಪು ಅಭಿಮಾನಿಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗುವ ಮೂಲಕ ಅಪ್ಪುವನ್ನ ಜನರ ಖುಷಿಯಲ್ಲಿ ನೋಡ್ತಾ ಇದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಭಾವನೆಗಳನ್ನ ತೋರಿಸಿಕೊಳ್ತಾ ಇದಾರೆ. ಹಾಗೇ ರಾಘವೇಂದ್ರ ರಾಜ್‌ಕುಮಾರ್‌ ಅಪ್ಪು ಅವರ ಹೆಸರನ್ನ ತಮ್ಮ ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳುವ ಮೂಲಕ ಅಪ್ಪುವನ್ನ ಪ್ರತಿದಿನ ನೆನಪಿಸಿಕೊಳ್ತಾ ಇದಾರೆ.

ಇನ್ನು ರಾಘವೇಂದ್ರ ರಾಜ್‌ಕುಮಾರ್‌ ಎದೆ ಮೇಲೆ 3 ಹೆಸರನ್ನ ಟ್ಯಾಟು ಹಾಕಿಸಿದ್ದಾರೆ. ಅಪ್ಪು, ಟೊಟೊ, ನುಕ್ಕಿ ಅಂತ ಕನ್ನಡದಲ್ಲಿ ಟ್ಯಾಟು ಹಾಕಿಸಿದ್ದಾರೆ. ಟೊಟೊ ಮತ್ತು ನುಕ್ಕಿ ಅಂದ್ರೆ ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ನಿಕ್ ನೇಮ್. ರಾಘವೇಂದ್ರ ರಾಜ್‌ಕುಮಾರ್‌ ಅವರ ಆರೋಗ್ಯ ಸ್ಥಿತಿ ಹೇಳುವಷ್ಟು ಸರಿ ಇಲ್ಲ. ಇಂತಹ ಟೈಮ್‌ನಲ್ಲೂ ಅಪ್ಪುಗೋಸ್ಕರ ಅವರು ಟ್ಯಾಟು ಹಾಕಿಸಿರುವುದು ವಿಶೇಷ ಅಂತಾನೇ ಹೇಳಬಹುದು.

-masthmagaa.com

Contact Us for Advertisement

Leave a Reply