ಜಮ್ಮು ಕಾಶ್ಮೀರಕ್ಕೆ ಹೋಗಿದ್ಯಾಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ?

masthmagaa.com:

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 2 ದಿನಗಳ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. 2019ರಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಅಲ್ಲಿನ ಪರಿಸ್ಥಿತಿಯ ಪರಿಶೀಲನೆ ನಡೆಸಲು ರಾಹುಲ್ ಗಾಂಧಿ ತೆರಳಿದ್ರು. ಆದ್ರೆ ರಾಹುಲ್ ನೇತೃತ್ವದ ಕಾಂಗ್ರೆಸ್ಸಿಗರ ನಿಯೋಗವನ್ನು ಏರ್​​ಪೋರ್ಟ್​​ನಲ್ಲೇ ತಡೆದು ವಾಪಸ್ ದೆಹಲಿಗೆ ಕಳುಹಿಸಲಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದು, ವಿವಿಧ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಕಳೆದ ವಾರವಷ್ಟೇ ಜಮ್ಮು ಕಾಶ್ಮೀರ ಆಡಳಿತ ಒಂದು ಬುಕ್​ಲೆಟ್ ಬಿಡುಗಡೆ ಮಾಡಿ, ತನ್ನ 2 ವರ್ಷದ ಸಾಧನೆ ಬಗ್ಗೆ ಹೇಳಿಕೊಂಡಿತ್ತು. ಕೇಂದ್ರದ 890 ಕಾನೂನುಗಳ ಜಾರಿ, ರಾಜ್ಯ ಸರ್ಕಾರ ತಂದಿದ್ದ 205 ಕಾನೂನುಗಳ ಹಿಂತೆಗೆತ ಮತ್ತು 130 ಕಾನೂನುಗಳಲ್ಲಿ ತಿದ್ದುಪಡಿ ಮಾಡಿರೋದಾಗಿ ತಿಳಿಸಿತ್ತು.

-masthmagaa.com

Contact Us for Advertisement

Leave a Reply