ಚುನಾವಣೆ ಹೊತ್ತಲ್ಲಿ ರಾಹುಲ್ ವಿದೇಶ ಪ್ರವಾಸ..! ಬಿಜೆಪಿ ವ್ಯಂಗ್ಯ…

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಗೂ ಮುನ್ನ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಮತ್ತು ಹರಿಯಾಣ ಹೌಸಿಂಗ್ ಬೋರ್ಡ್ ಅಧ್ಯಕ್ಷ ಜವಾಹರ್ ಯಾದವ್, ಚುನಾವಣೆಗೂ 10 ದಿನ ಮೊದಲು ರಾಹುಲ್ ಗಾಂಧಿ ಬ್ಯಾಂಕಾಕ್ ಹೋಗಿದ್ದಾರೆ ಅಂತ ಆರೋಪಿಸಿದ್ದಾರೆ. ನಿನ್ನೆ ಅಹ್ಮದ್ ಪಟೇಲ್ ಅವರು ಭೂಪೇಂದ್ರ ಸಿಂಗ್ ಹೂಡಾ ಬಳಿ ಪಾರ್ಟಿ ಎಲ್ಲಿ ಹೋಯ್ತು ಎಂದು ಕೇಳುತ್ತಿದ್ದರು. ಆದ್ರೆ ಇವತ್ತು ಪಾರ್ಟಿ ಬ್ಯಾಂಕಾಕ್ ಹೋಗಿದೆ ಅನ್ನೋದು ಗೊತ್ತಾಗಿದೆ ಅಂತ ವ್ಯಂಗ್ಯವಾಡಿದ್ದಾರೆ.

ಇನ್ನು ರಾಹುಲ್ ಗಾಂಧಿ ಬ್ಯಾಂಕಾಕ್ ಹೋಗಿರುವ ಸುದ್ದಿ ಟ್ವಿಟ್ಟರ್‍ನಲ್ಲಿ ಟ್ರೆಂಡ್ ನಲ್ಲಿದೆ. ಮಾಧ್ಯಮಗಳ ಪ್ರಕಾರ ರಾಹುಲ್ ಗಾಂಧಿ ಶನಿವಾರ ಸಂಜೆ ಬ್ಯಾಂಕಾಕ್‍ಗೆ ತೆರಳಿದ್ದಾರೆ. ಆದ್ರೆ ಅವರು ಬ್ಯಾಂಕಾಕ್ ತೆರಳಿರುವ ಕಾರಣ ಮಾತ್ರ ತಿಳಿದುಬಂದಿಲ್ಲ. ಈ ಹಿಂದೆಯೂ ರಾಹುಲ್ ಗಾಂಧಿ ಚುನಾವಣೆಗೂ ಮುನ್ನ ವಿದೇಶಕ್ಕೆ ಹೋಗಿ ಸುದ್ದಿಯಾಗಿದ್ದರು.

Contact Us for Advertisement

Leave a Reply