ತನ್ನ ಫಾಲೋವರ್ಸ್​ ಕಮ್ಮಿ ಆಗ್ತಿದ್ದಾರೆ ನೋಡಿ ಎಂದ ರಾಹುಲ್​ ಗಾಂಧಿ!

masthmagaa.com:

ಟ್ವಿಟ್ಟರ್​ನಲ್ಲಿ ತಮ್ಮ ಫಾಲೋವರ್ಸ್ ಸಂಖ್ಯೆ ಕಮ್ಮಿಯಾಗ್ತಿರೋದಕ್ಕೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ CEO ಪರಾಗ್‌ ಅಗ್ರವಾಲ್‌ಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ಈ ಸಂಬಂಧ ಪ್ರಶ್ನೆ ಮಾಡಿದ್ದಾರೆ. ಡಿಸೆಂಬರ್‌ 27ರಂದು ಬರೆದಿರುವ ಈ ಪತ್ರದಲ್ಲಿ ತಮ್ಮ ಡೇಟಾದೊಂದಿಗೆ ಮೋದಿ, ಶಾ ಮತ್ತು ಶಶಿ ತರೂರ್‌ರವರ ಟ್ವಿಟರ್‌ ಅಂಕಿ-ಆಂಶಗಳನ್ನು ಹೋಲಿಕೆ ಮಾಡಿ ವಿಶ್ಲೇಷಿಸಿದ್ದಾರೆ. 2021ರ ಮೊದಲು ಏಳು ತಿಂಗಳವರೆಗೂ ತಮ್ಮ ಫಾಲೊವರ್ಸ್‌ ಸಂಖ್ಯೆಗೆ ಪ್ರತಿ ತಿಂಗಳು 4 ಲಕ್ಷ ಜನ ಹೆಚ್ಚುವರಿಯಾಗಿ ಸೇರುತ್ತಿದ್ದರು, ಆದ್ರೆ ಅಗಸ್ಟ್‌ನಿಂದ ಈಚೆಗೆ ಅದು ಹೆಚ್ಚುಕಡಿಮೆ ಜೀರೋಗೆ ಬಂದು ತಲುಪಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರ್‌ನ ವಕ್ತಾರರು, ಸ್ಪ್ಯಾಮ್‌ ಮತ್ತು ಕೃತಕ ಮಾರ್ಪಾಡು ತಡೆಯಲು ನಾವು ಮಷಿನ್‌ ಲರ್ನಿಂಗ್‌ನ್ನ ಬಳಸುವದರಿಂದ ಫಾಲೋವರ್ಸ್‌ ಸಂಖ್ಯೆಯಲ್ಲಿ ವ್ಯತ್ಯಾಸವಾಗೋದು ಸಹಜ ಎಂದಿದ್ದಾರೆ.

-masthmagaa.com

Contact Us for Advertisement

Leave a Reply