ಲಖೀಂಪುರ್​ಖೇರಿಗೆ ಹೊರಟ ರಾಹುಲ್ ಗಾಂಧಿ!

masthmagaa.com:

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವತ್ತು ಮೊದಲು ಪ್ರಿಯಾಂಕ ಗಾಂಧಿಯನ್ನು ಸೋಮವಾರದಿಂದ ವಶದಲ್ಲಿ ಇಟ್ಟಿದ್ದ ಸೀತಾಪುರ್​​ಗೆ ಹೋದ್ರು. ಇದೇ ವೇಳೆ ಪ್ರಿಯಾಂಕ ಗಾಂಧಿಯನ್ನು ರಿಲೀಸ್ ಮಾಡಲಾಯ್ತು. ನಂತರ ರಾಹುಲ್, ಪ್ರಿಯಾಂಕ ಸೇರಿದಂತೆ ಐವರು ಸೀತಾಪುರ್​ನಿಂದ ಹಿಂಸಾಚಾರಪೀಡಿತ ಲಖೀಂಪುರ್​ಖೇರಿಗೆ ಭೇಟಿ ನೀಡಿದ್ರು. ಇದಕ್ಕೂ ಮುನ್ನ ರಾಹುಲ್ ಗಾಂಧಿಗೆ ಖಾಸಗಿ ವಾಹನದಲ್ಲಿ ಹೋಗೋಕೆ ಬಿಡಲ್ಲ. ನಾವೇ ಕರ್ಕೊಂಡು ಹೋಗ್ತೀವಿ ಅಂತ ಪೊಲೀಸರು ಅಡ್ಡಗಟ್ಟಿ ಕೂರಿಸಿದ್ರು. ಆದ್ರೆ ರಾಹುಲ್ ಗಾಂಧಿ ನಮ್ಮ ಕಾರಿನಲ್ಲೇ ಹೋಗ್ತೀವಿ ಅಂತ ಹಠ ಹಿಡಿದ್ರು. ಆಗ ಮಾತನಾಡಿದ ರಾಹುಲ್ ಗಾಂಧಿ, ನಾವು ಹೇಗೆ ಪ್ರಯಾಣ ಮಾಡ್ಬೇಕು ಅನ್ನೋದನ್ನ ನೀವು ಡಿಸೈಡ್ ಮಾಡ್ತೀರಾ..? ಎಂದು ಪ್ರಶ್ನಿಸಿದ್ರು. ಭಾರತ ಒಂದು ಕಾಲದಲ್ಲಿ ಪ್ರಜಾಪ್ರಭುತ್ವ ದೇಶವಾಗಿತ್ತು. ಆದ್ರೀಗ ಇಲ್ಲಿ ಸರ್ವಾಧಿಕಾರತ್ವ ಅಂದ್ರೆ ಡಿಕ್ಟೇಟರ್​​ಶಿಪ್​ ಇದೆ ಅಂತ ಕಿಡಿಕಾರಿದ್ರು.

-masthmagaa.com

Contact Us for Advertisement

Leave a Reply