ಒಳಚರಂಡಿ ನೀರಿಗೂ ಕೆನಡಾದ ಟೊರೊಂಟೊದಲ್ಲಿ ಟ್ಯಾಕ್ಸ್‌ ನಿಗದಿ!

masthmagaa.com:

ಸ್ನೇಹಿತರೇ ನಾವು ದಿನ ನಿತ್ಯ ಖರೀದಿಸೊ ಮತ್ತು ಬಳಸೋ ವಸ್ತುಗಳ ಮೇಲೆ ತೆರಿಗೆ ಪಾವತಿಸೊದು ಸಾಮಾನ್ಯ ವಿಚಾರ. ಆದ್ರೆ ಕೆನಡದಲ್ಲಿ ಮನೆಯಿಂದ ಹೊರ ಹೋಗುವ ಚರಂಡಿ ನೀರಿಗೂ ಟ್ಯಾಕ್ಸ್‌ ಹಾಕಲಾಗ್ತಿದೆ. ಟೊರೊಂಟೊ ಸಿಟಿಯಲ್ಲಿ ʻರೆನ್‌ಟ್ಯಾಕ್ಸ್‌ʼ Rain Tax ಅನ್ನೊ ಹೆಸರಿನಲ್ಲಿ ಇಂತಹ ಯೋಜನೆಯೊಂದು ಜಾರಿಯಾಗಲಿದೆ. ಜನ ಸಾಮಾನ್ಯರು ತಮ್ಮ ಮನೆಗಳಿಂದ ಒಳ ಚರಂಡಿಗೆ ಹರಿ ಬೀಡೋ ನೀರಿನ ಪ್ರಮಾಣವನ್ನ ಆಧರಿಸಿ ಅದ್ರ ಮೇಲೆ ತೆರಿಗೆ ವಿಧಿಸೋಕೆ ಅಲ್ಲಿನ ಸರ್ಕಾರ ಯೋಜನೆ ಹಾಕಿದೆ. ಬರುವ ಏಪ್ರಿಲ್‌ನಿಂದ ಇದು ಜಾರಿಯಾಗಲಿದೆ ಅಂತಾ ಗೊತ್ತಾಗಿದೆ. ಇನ್ನು ಈ ಚರಂಡಿ ನೀರಿನ ಟ್ಯಾಕ್ಸ್‌ ವಿರುದ್ಧ ಅಲ್ಲಿನ ಜನ ಭಾರೀ ವಿರೋಧ ವ್ಯಕ್ತ ಪಡಿಸಿ, ಪ್ರತಿಭಟನೆ ಮಾಡ್ತಿದ್ದಾರೆ. ಈಗಾಗ್ಲೇ ನಾನಾ ರೀತಿಯ ವಾಟರ್‌ಬಿಲ್‌ಗಳನ್ನ ಕಟ್ತಿದ್ದೀವಿ. ಮಳೆ ನೀರನ್ನ ಸರಿಯಾಗಿ ಮ್ಯಾನೇಜ್‌ ಮಾಡ್ತಿಲ್ಲ ಅಂತಲೂ ಚಾರ್ಜ್‌ ಕೊಡ್ತಿದ್ದೀವಿ. ಈಗ ಚರಂಡಿ ನೀರಿಗೂ ಚಾರ್ಜ್‌ ಕೊಡಬೇಕಾ ಅಂತ ಅಲ್ಲಿನ ಜನ ತೀವ್ರ ಆಕ್ರೋಶ ಹೊರಹಾಕ್ತಿದ್ದಾರೆ.

-masthmagaa.com

Contact Us for Advertisement

Leave a Reply