ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಪೂರ್ವ ಕರಾವಳಿಗೆ ಅಪ್ಪಳಿಸಲಿದೆ ʻಮೋಚಾʼ ಚಂಡಮಾರುತ!

masthmagaa.com:

ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ʻಮೋಚಾʼ ಚಂಡಮಾರುತ ಸೃಷ್ಟಿಯಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದ್ರಿಂದಾಗಿ ದೇಶದ ಬಹುತೇಕ ಕಡೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಮೇ 6ರಂದು ಅಂದ್ರೆ ನಾಳೆಯಿಂದ ಮೋಚಾ ಸೈಕ್ಲೋನ್‌ ಅಪ್ಪಳಿಸಲಿದ್ದು, 5 ದಿನಗಳ ಕಾಲ ಭಾರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.ಈ ಹಿನ್ನೆಲೆಯಲ್ಲಿ ಮೀನುಗಾರರು, ಸಣ್ಣ ಹಡಗು ಹಾಗೂ ದೋಣಿಗಳು ಬಂಗಾಳ ಕೊಲ್ಲಿ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ. ಇನ್ನು ಮೋಚಾ ಸೈಕ್ಲೋನ್‌ನ ಹೆಚ್ಚು ಭೀತಿಯಿರುವ ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ಅಗತ್ಯ ಸಿದ್ಧತೆ ಮಾಡಿಕೊಂಡಿರೋದಾಗಿ ಹೇಳಿವೆ. ಇತ್ತ ರಾಜ್ಯದಲ್ಲೂ ಮೇ 6ರಿಂದ 9ರವರೆಗೆ ಮಳೆಯಾಗಲಿದೆ ಅಂತ ಮುನ್ಸೂಚನೆ ನೀಡಲಾಗಿದೆ. ಅಂದ್ಹಾಗೆ ವರ್ಷದ ಮೊದಲ ಚಂಡಮಾರುತಕ್ಕೆ ʻಮೋಚಾʼ ಅನ್ನೊ ಹೆಸರನ್ನ ಯೆಮನ್‌ ಸೂಚಿಸಿದೆ, ಮೋಚಾ(ಮೋಖಾ) ಅನ್ನೋದು ಯೆಮೆನ್‌ನ ಒಂದು ನಗರವಾಗಿದೆ.

-masthmagaa.com

Contact Us for Advertisement

Leave a Reply