ದೇಶ ಕಟ್ಟಿದ್ದೇ ಗಾಂಧಿ-ನೆಹರು, ಹೀಗಾಗಿ ನಾವು ಅವರ ಗುಲಾಮರು: ಶಾಸಕ

masthmagaa.com:

ರಾಜಸ್ಥಾನ ಸಿಎಂ ಸಲಹೆಗಾರ ಮತ್ತು ಅಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಸಪೋರ್ಟ್ ಬೆಂಬಲ ಕೊಟ್ಟಿರೋ ಪಕ್ಷೇತರ ಅಭ್ಯರ್ಥಿ ಸನ್ಯಂ ಲೋಧ ತಾವು ಗಾಂಧಿ-ನೆಹರು ಕುಟುಂಬದ ಗುಲಾಮ ಅಂತ ಹೇಳಿಕೊಂಡಿದ್ದಾರೆ. ರಾಜಸ್ಥಾನ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಲಾಪದ ವೇಳೆ ಕೆಲವರು ನಮ್ಮನ್ನ ಗಾಂಧಿ – ನೆಹರು ಕುಟುಂಬದ ಗುಲಾಮರು ಅಂತೇಳಿದ್ರು. ಹೌದು ನಾವು ಗಾಂಧಿ ನೆಹರು ಕುಟುಂಬದ ಗುಲಾಮರೇ.. ಈ ದೇಶವನ್ನ ನಿರ್ಮಾಣ ಮಾಡಿದ್ದೇ ಗಾಂಧಿ ನೆಹರು, ಅಂದ್ಮೇಲೆ ನಮ್ಮ ಉಸಿರು ಇರೋವರೆಗೆ ನಾವು ಗುಲಾಮಗಿರಿ ಮಾಡ್ತಾ ಇರ್ತೀವಿ ಅಂತ ಸನ್ಯಂ ಲೋಧ ಹೇಳಿದ್ರು. ಇದಕ್ಕೆ ವಿಪಕ್ಷಗಳು ಅವರನ್ನ ಗುಲಾಮ, ಗುಲಾಮ ಅಂತ ಟೀಕಿಸಿದ್ವು.

-masthmagaa.com

Contact Us for Advertisement

Leave a Reply