ಕಾಶ್ಮೀರ ಕಣಿವೆಯಲ್ಲಿ ಲಷ್ಕರ್‌ ಉಗ್ರನ ಎನ್‌ಕೌಂಟರ್‌!

masthmagaa.com:

ಜಮ್ಮುಕಾಶ್ಮೀರದಲ್ಲಿ ಇಂದು ಕೂಡ ಭಯೋತ್ಪಾದ ವಿರೋಧಿ ಕಾರ್ಯಾಚರಣೆ ಕಂಟಿನ್ಯೂ ಆಗಿದ್ದು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗೆ ಸೇರಿದ ಓರ್ವ ಭಯೋತ್ಪಾದಕನನ್ನ ಹೊಡೆದುರುಳಿಸಲಾಗಿದೆ. ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಅಲ್ಲಿನ ಪೋಲಿಸರು ಹಾಗೂ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್‌ನ ಟಾಪ್‌ ಉಗ್ರನನ್ನ ಹತ್ಯೆ ಮಾಡಲಾಗಿದೆ. ಮೃತ ಉಗ್ರನನ್ನ ಕ್ವಾರಿ ಅಂತ ಗುರುತಿಸಲಾಗಿದ್ದು, ಈ ಉಗ್ರ ಪಾಕ್‌ ಪ್ರಜೆ ಅಂತ ತಿಳಿದು ಬಂದಿದೆ. ಅಲ್ದೆ ಈತ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಉಗ್ರಗಾಮಿ ತರಬೇತಿ ಪಡೆದಿದ್ದ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply