ಘಾಜಿಪುರ್​ ಗಡಿಯಲ್ಲಿ ಹೆಚ್ಚುತ್ತಿದೆ ಪ್ರತಿಭಟನಾಕಾರರ ಸಂಖ್ಯೆ!

masthmagaa.com:

ಉತ್ತರಪ್ರದೇಶ-ದೆಹಲಿಯ ಘಾಜಿಪುರ್​ ಗಡಿಯಲ್ಲಿ ಪ್ರತಿಭಟನೆ ನಡೆಸ್ತಿರೋ ರೈತರನ್ನ ಜಾಗ ಖಾಲಿ ಮಾಡಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಭಾರಿ ಸಂಖ್ಯೆಯಲ್ಲಿ ಪೊಲೀಸರು ಮತ್ತು ರಾಪಿಡ್ ಆಕ್ಷನ್ ಫೋರ್ಸ್​​ ಕಳಿಸಿ ಪ್ರತಿಭಟನಾನಿರತರನ್ನ ಎಬ್ಬಿಸಲು ಟ್ರೈ ಮಾಡ್ತಿದೆ. ಆದ್ರೆ ಭಾರತೀಯ ಕಿಸಾನ್ ಯೂನಿಯನ್ (BKU) ಸಂಘಟನೆಯ ವಕ್ತಾರ ರಾಕೇಶ್ ಟಿಕೈತ್​ ನೇತೃತ್ವದಲ್ಲಿ ಇಲ್ಲಿ ಪ್ರತಿಭಟನೆ ನಡೆಸ್ತಿರೋರು ನಾವ್ ಜಾಗ ಖಾಲಿ ಮಾಡಲ್ಲ ಅಂತ ಪಟ್ಟು ಹಿಡಿದು ಕೂತಿದ್ದಾರೆ. ಸ್ವತಃ ರಾಕೇಶ್​ ಟಿಕೈತ್ ಅವರೇ ಗುರುವಾರ ರಾತ್ರಿ ಗಳಗಳನೇ ಅತ್ತಿದ್ರು. ಇದರ ವಿಡಿಯೋಗಳು ವೈರಲ್ ಆಗ್ತಿದ್ದಂತೆಯೇ ಮತ್ತಷ್ಟು ಪ್ರತಿಭಟನಾಕಾರರು ಈಗ ಘಾಜಿಪುರ್​ ಬಾರ್ಡರ್​ಗೆ ಬಂದಿದ್ದಾರೆ. ಹೀಗಾಗಿ ಗಾಜಿಪುರ್​ ಗಡಿಯಲ್ಲಿ ಒಂದ್​ರೀತಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಮುಂದೇನು ಅನ್ನೋ ಪ್ರಶ್ನೆ ಮೂಡಿದೆ. ಅಧಿಕಾರಿಗಳು ಪ್ರತಿಭಟನಾಕಾರರನ್ನ ಬಲವಂತಬಾಗಿ ಎಬ್ಬಿಸ್ತಾರಾ? ಅರೆಸ್ಟ್ ಮಾಡ್ತಾರಾ? ದೆಹಲಿಯಲ್ಲಿ ನಡೆದ ಹಿಂಸಾಚಾರ ಘಾಜಿಪುರ್​ನಲ್ಲಿ ಮತ್ತೆ ಮರುಕಳಿಸುತ್ತಾ? ಅನ್ನೋ ಅನುಮಾನ, ಆತಂಕ ಶುರುವಾಗಿದೆ.

ಇನ್ನು ನಮ್ಮ ಪ್ರತಿಭಟನೆಯಲ್ಲಿ ರಾಜಕೀಯ ನಾಯಕರನ್ನ ಸೇರಿಸಿಕೊಳ್ಳಲ್ಲ ಅಂತ ರೈತ ಸಂಘಟನೆಗಳು ಆರಂಭದಲ್ಲೇ ಹೇಳಿದ್ವು. ಆದ್ರೀಗ ರಾಜಕೀಯ ನಾಯಕರ ಎಂಟ್ರಿ ಕೂಡ ಆಗಿದೆ. ರಾಷ್ಟ್ರೀಯ ಲೋಕ್ ದಳ್ (RLD) ನಾಯಕ ಜಯಂತ್ ಚೌಧುರಿ ಘಾಜಿಪುರ್​ ಗಡಿಗೆ ಧಾವಿಸಿ ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ದಾರೆ. ನಿನ್ನೆಯಷ್ಟೇ ಜಯಂತ್ ಚೌಧುರಿಯ ತಂದೆ ಮತ್ತು ಆರ್​ಎಲ್​ಡಿ ಪಕ್ಷದ ಸ್ಥಾಪಕ ಅಜಿತ್ ಸಿಂಗ್ ರೈತ ಮುಖಂಡ ರಾಕೇಶ್​ ಟಿಕೈತ್​ ಜೊತೆ ಫೋನಲ್ಲಿ ಮಾತನಾಡಿ, ನಾವ್​ ನಿಮ್ಗೆ ಸಪೋರ್ಟ್ ಮಾಡ್ತೀವಿ ಅಂತ ಹೇಳಿದ್ರು.

ಇನ್ನು ರೈತರ ಪ್ರತಿಭಟನೆ ನಡೀತಿರೋ ದೆಹಲಿ-ಹರಿಯಾಣದ ಸಿಂಘು ಗಡಿ ಮತ್ತು ಟಿಕ್ರಿ ಗಡಿಯಲ್ಲೂ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಲಾಗಿದೆ. ಮತ್ತೊಂದುಕಡೆ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವು ಖಲಿಸ್ತಾನಿ ಟ್ವಿಟ್ಟರ್​ ಅಕೌಂಟ್​​ಗಳ ಮೇಲೆ ದೆಹಲಿ ಪೊಲೀಸರು ಕಣ್ಣಿಟ್ಟಿದೆ. ಅಂತಹ ಟ್ವಿಟ್ಟರ್ ಅಕೌಂಟ್​ಗಳನ್ನ ಗುರ್ತಿಸಲಾಗಿದ್ದು, ಆ ಅಕೌಂಟ್​ಗಳಲ್ಲಿದ್ದ ಕಂಟೆಂಟ್​ಗಳನ್ನ ಪೊಲೀಸರು ತೆಗೆದುಕೊಂಡಿದ್ದಾರೆ. ಈ ಅಕೌಂಟ್​ಗಳಿಂದ ಜನರನ್ನ ಪ್ರಚೋದಿಸುವ ಟ್ವೀಟ್​ಗಳನ್ನ ಮಾಡಲಾಗಿತ್ತು ಅನ್ನೋದು ಗೊತ್ತಾಗಿದೆ. ಇನ್ನು ಹಿಂಸಾಚಾರ ವೇಳೆ ಪೊಲೀಸರಿಂದ ವೈರ್​ಲೆಸ್ ಸೆಟ್​ ಕಸಿದುಕೊಂಡಿದ್ದ ಆರೋಪಿಯನ್ನ ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದು, ಆತನಿಂದ ವೈರ್​ಲೈಸ್​ ಸೆಟ್ಟನ್ನ ರಿಕವರ್ ಮಾಡಿದ್ದಾರೆ. ಈತನ ವಿರುದ್ಧ 2019ರಲ್ಲಿ ದೆಹಲಿಯ ವಿವಿಧ ಪೊಲೀಸ್​ ಸ್ಟೇಷನ್​ಗಳಲ್ಲಿ 3 ಕೇಸ್ ದಾಖಲಾಗಿತ್ತು.

-masthmagaa.com

Contact Us for Advertisement

Leave a Reply