ದಿನಪತ್ರಿಕೆಯಲ್ಲಿ ಕ್ಷಮೆ ಕೋರಿದ ಪತಂಜಲಿ ಆಯುರ್ವೇದ ಕಂಪನಿ!

masthmagaa.com:

ಪತಂಜಲಿ ಕಂಪನಿಯ ಬಾಬಾ ರಾಮ್‌ದೇವ್‌ ಮತ್ತು ಕಂಪನಿ ಅಧ್ಯಕ್ಷ ಬಾಲಕೃಷ್ಣ ಮತ್ತೆ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಿದ್ದಾರೆ. ದೇಶದ ಪ್ರಮುಖ ದಿನಪತ್ರಿಕೆಗಳಲ್ಲಿ ಇವರ ಕ್ಷಮಾಪಣೆ ಪ್ರಕಟವಾಗಿದೆ. ʻದಾರಿತಪ್ಪಿಸೋ ಜಾಹೀರಾತು ನೀಡಿರೋದಕ್ಕಾಗಿ ನಮ್ಮನ್ನ ಕ್ಷಮಿಸ್ಬಿಡಿ…ಇನ್ಮುಂದೆ ಈ ತರ ಮಾಡಲ್ಲʼ ಅಂತ ಕ್ಷಮೆ ಕೋರಿದ್ದಾರೆ. ಅಂದ್ಹಾಗೆ ಇತ್ತೀಚಿಗೆ ಸುಪ್ರೀಂ ಕೋರ್ಟ್‌ ಇವರಿಗೆ ಕ್ಷಮಾಪಣೆ ಕೋರುವಂತೆ ಹೇಳಿತ್ತು. ಕ್ಷಮಾಪಣೆ ಕೋರಿದ ಕಾಲಮ್‌ ಚಿಕ್ಕದಾಗಿದೆ…. ಪತಂಜಲಿ ಜಾಹೀರಾತು ನೀಡೋವಾಗ ನ್ಯೂಸ್‌ಪೇಪರ್‌ನಲ್ಲಿ ಅದೆಷ್ಟು ದೊಡ್ಡ ಕಾಲಮ್‌ ಬಳಸ್ತಿರೋ, ಅಷ್ಟೇ ದೊಡ್ಡ ಕಾಲಮ್‌ನಲ್ಲಿ ನಿಮ್ಮ ಕ್ಷಮಾಪಣೆ ಪ್ರಕಟವಾಗ್ಬೇಕು ಅಂತ ಹೇಳಿತ್ತು. ಸೋ ಕೋರ್ಟ್‌ ನಿರ್ದೇಶನದ ಮೇರೆಗೆ ಇದೀಗ ಪತಂಜಲಿ ಇನ್ನೂ ದೊಡ್ಡ ಕಾಲಮ್‌ನಲ್ಲಿ ಕ್ಷಮಾಪಣೆ ಪ್ರಕಟ ಮಾಡಿದೆ.

-masthmagaa.com

Contact Us for Advertisement

Leave a Reply