ರಮೇಶ್, ಲಕ್ಷ್ಮೀ ಸಹೋದರ ಭೇಟಿಯಾಗಿದ್ದು ಯಾಕೆ..?

ರಾಜಕೀಯ ಬದ್ಧವೈರಿಗಳಾದ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚೆನ್ನರಾಜು ಭೇಟಿಯಾಗಿದ್ದಾರೆ. ಬೆಳಗಾವಿಯ ಐಬಿಯಲ್ಲಿ ರಮೇಶ್ ಜಾರಕಿಹೊಳಿಯನ್ನು ಭೇಟಿಯಾದ ಚೆನ್ನರಾಜು ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಇಬ್ಬರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಇನ್ನು ರಮೇಶ್ ಜಾರಕಿಹೊಳಿ ಅನರ್ಹಗೊಂಡು 2 ತಿಂಗಳಾದ್ರೂ ಕೂಡ ಇನ್ನೂ ಸರ್ಕಾರಿ ಬಂಗಲೆ ಖಾಲಿ ಮಾಡಿಲ್ಲ. ಅದಕ್ಕೂ ಮೊದಲೇ ಅವರು ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರೂ ಸಿಎಂ ಆಗಿದ್ದ ಎಚ್‍ಡಿಕೆ ಅವರ ಬಂಗಲೆ ವಾಪಸ್ ಪಡೆದಿರಲಿಲ್ಲ. ಈಗ ಯಡಿಯೂರಪ್ಪ ಕೂಡ ರಮೇಶ್ ಜಾರಕಿಹೊಳಿಯವರಿಗೆ ನೀಡಿರುವ ಬಂಗಲೆ ವಾಪಸ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ನೀಡಿದ್ದ ಬಂಗಲೆಯನ್ನು ವಾಪಸ್ ಪಡೆದು ಬದಲಿ ಹಂಚಿಕೆ ಮಾಡಿದ್ದರೂ ಕೂಡ ರಮೇಶ್ ಜಾರಕಿಹೊಳಿಗೆ ನೀಡಿರುವ ಬಂಗಲೆಯನ್ನು ವಾಪಸ್ ಪಡೆದಿಲ್ಲ.

Contact Us for Advertisement

Leave a Reply