ರಮೇಶ್ ಸಿಡಿ ಕೇಸ್​​! ಯುವತಿ ವಿಡಿಯೋ ಬಿಡುಗಡೆ

masthmagaa.com:

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ರಮೇಶ್ ಜಾರಕಿಹೊಳಿ ಕಂಪ್ಲೆಂಟ್ ಕೊಡ್ತಿದ್ದಂತೆ ಸಿಡಿಯಲ್ಲಿದ್ದ ಯುವತಿ ಕೂಡ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಹಸಿಬಿಸಿ ವಿಡಿಯೋದಿಂದ ನನ್ನ ಮಾನ, ಮರ್ಯಾದೆ ಹರಾಜಾಗಿದೆ. ಈ ವಿಡಿಯೋ ಹೇಗೆ ಮಾಡಿದ್ದಾರೋ, ಹೇಗೆ ಬಿಡುಗಡೆ ಮಾಡಿದ್ದಾರೋ ನನಗೆ ಗೊತ್ತಿಲ್ಲ.. ರಮೇಶ್ ಜಾರಕಿಹೊಳಿಯವರೇ ನನಗೆ ಕೆಲಸ ಕೊಡಿಸುತ್ತೇನೆ ಅಂತ ನಂಬಿಸಿ ಮೋಸ ಮಾಡಿದ್ದಾರೆ. ಎಲ್ಲರೂ ನಮ್ಮ ಮನೆ ಬಳಿ ಬಂದು ಕೇಳಿಕೊಂಡು ಹೋಗ್ತಿದ್ದಾರೆ. ಇದ್ರಿಂದ ನನ್ನ ತಂದೆ-ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಕೂಡ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನನಗೆ ಯಾವ ರಾಜಕೀಯ ಬೆಂಬಲವೂ ಇಲ್ಲ.. ಹೀಗಾಗಿ ನನಗೆ ರಕ್ಷಣೆ ನೀಡಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.

masthmagaa.com:

Contact Us for Advertisement

Leave a Reply