masthmagaa.com:

ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದುಕಡೆ ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ್ರೆ, ಮತ್ತೊಂದುಕಡೆ ವಿಡಿಯೋದಲ್ಲಿರೋ ಯುವತಿ ರಮೇಶ್​ ಜಾರಕಿಹೊಳಿಯೇ ನನಗೆ ಕೆಲಸ ಕೊಡಿಸುವ ಆಮಿಷ ತೋರಿಸಿ ಇದೆಲ್ಲಾ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನನಗೆ ರಕ್ಷಣೆ ಕೊಡಿ ಅಂತ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರೋದು ಈ ಪ್ರಕರಣವನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇದರ ನಡುವೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ಮತ್ತಷ್ಟು ಬೆಳವಣಿಗೆಯಾಗಿದೆ. ಮೊದಲನೇದಾಗಿ, ಬೆಂಗಳೂರಿನ ಆರ್​.ಟಿ. ನಗರದ ರೂಮ್ ಮಾಲೀಕರಿಗೆ ಕರೆ ಮಾಡಿರೋ ಯುವತಿ ಕ್ಷಮೆ ಕೇಳಿದ್ದಾಳಂತೆ. ನನ್ನಿಂದ ನಿಮಗೆ ಸಮಸ್ಯೆಯಾಗಿದೆ, ನನ್ನನ್ನ ಕ್ಷಮಿಸಿ. ಇನ್ನು 2-3 ದಿನದಲ್ಲಿ ರೂಮ್ ಖಾಲಿ ಮಾಡ್ತೀನಿ ಅಂತ ಕರೆ ಮಾಡಿ ಹೇಳಿದ್ದಾಳಂತೆ. ಹೀಗಂತ ರೂಮ್ ಮಾಲೀಕರು ಎಸ್​ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಅಂತ ವರದಿಯಾಗಿದೆ.

ಮತ್ತೊಂದುಕಡೆ, ವಿಡಿಯೋದಲ್ಲಿರೋ ಯುವತಿ ತನಗೆ ರಕ್ಷಣೆ ಕೊಡುವಂತೆ ಮನವಿ ಮಾಡಿದ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಯುವತಿ ಭಯಗೊಂಡಿರೋದು ಆಕೆಯ ಹೇಳಿಕೆಯಿಂದ ಗೊತ್ತಾಗುತ್ತೆ. ಹೀಗಾಗಿ ರಕ್ಷಣೆ ನೀಡೋದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಗೃಹ ಸಚಿವರು ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ರಕ್ಷಣೆ ಕೊಡ್ತೀವಿ ಅಂತ ಅವರು ಹೇಳಿದ್ದಾರೆ. ಜೊತೆಗೆ ಯುವತಿ ಬೇಕಾದ್ರೆ ನಮಗೆ ದೂರು ನೀಡಬಹುದು ಅಂತ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದ್ದಾರೆ.

ಮಗದೊಂದುಕಡೆ, ರಮೇಶ್ ಜಾರಕಿಹೊಳಿ ವಿಡಿಯೋ ಪ್ರಕರಣದಲ್ಲಿ ಮಾರ್ಚ್​ 12ನೇ ತಾರೀಖು ಓರ್ವ ಯುವತಿ ಸೇರಿದಂತೆ ಐವರನ್ನ ಎಸ್​ಐಟಿ ತಂಡ ವಶಕ್ಕೆ ಪಡೆದಿತ್ತು. ವಿಚಾರಣೆ ನಡೆಸಿದ ಬಳಿಕ ಅವರನ್ನ ಬಿಟ್ಟು ಕಳಿಸಿತ್ತು. ಇದೀಗ ಅದರಲ್ಲಿ ಮೂವರನ್ನ ಮತ್ತೆ ವಶಕ್ಕೆ ಪಡೆಯಲಾಗಿದೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply