ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ 3 ಪಕ್ಷಗಳಿಂದಲೂ ಟಿಕೆಟ್‌ ಆಫರ್‌ ಬಂದಿತ್ತು: ರಮ್ಯಾ

masthmagaa.com:

ಕಾಂಗ್ರೆಸ್‌ ಪಕ್ಷದ ಸ್ಟಾರ್‌ ಪ್ರಚಾರಕಿಯಾಗಿರೊ ನಟಿ, ಮಾಜಿ ಸಂಸದೆ ರಮ್ಯಾ, ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದಲೂ ನನಗೆ ಆಫರ್‌ ಬಂದಿತ್ತು ಅಂತ ಹೇಳಿದ್ದಾರೆ. ಸಂದರ್ಶನವೊಂದ್ರಲ್ಲಿ ಮಾತಾಡಿದ ರಮ್ಯಾ, ಕಾಂಗ್ರೆಸ್‌ ತಮಗೆ ಟಿಕೆಟ್‌ ಆಫರ್‌ ಮಾಡಿತ್ತು. 6 ಕ್ಷೇತ್ರಗಳನ್ನ ಮುಂದಿಟ್ಟು ಒಂದನ್ನ ಆಯ್ಕೆ ಮಾಡಿಕೊಳ್ಳಲು ಹೇಳಿತ್ತು ಅಂತ ಹೇಳಿದ್ದಾರೆ. ಜೊತೆಗೆ ಬಿಜೆಪಿಯ ಉನ್ನತ ನಾಯಕರೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದ್ರು. ಸಚಿವೆ ಮಾಡುವ ಆಫರ್‌ನ್ನ ಕೂಡ ನೀಡಿದ್ರು ಅಂತ ಹೇಳಿದ್ದಾರೆ. ಜೆಡಿಎಸ್ ಪಕ್ಷದಿಂದಲೂ ಒಂದು ರೀತಿ ಆಫರ್ ಬಂದಿತ್ತು ಅಂತ ಹೇಳಿರೊ ರಮ್ಯಾ, ಕುಮಾರಸ್ವಾಮಿ ಹಾಗೂ ನಾನೂ ಆಕಸ್ಮಿಕವಾಗಿ ಸಲೂನ್ ಒಂದರಲ್ಲಿ ಭೇಟಿಯಾಗಿದ್ವಿ. ಆಗ ಅವ್ರು ನೀವು ರಾಜಕೀಯದಿಂದ ದೂರ ಇರಬಾರದು, ನಿಮಗೆ ಶಕ್ತಿ ಇದೆ, ಬುದ್ಧಿ ಇದೆ ನೀವು ಹೀಗೆ ಸುಮ್ಮನೆ ಕೂರುವುದು ಸರಿಯಲ್ಲ ಅಂತ ಹೇಳಿದ್ರು ಎಂದಿದ್ದಾರೆ.

-masthmagaa.com

Contact Us for Advertisement

Leave a Reply