ರಮ್ಯಾಗೆ ಕೊಕ್..! ಮೋದಿ ಮಣಿಸಲು ಗುಜರಾತಿ ಮೊರೆ..!

ಮಾಜಿ ಸಂಸದೆ, ಚಿತ್ರ ನಟಿ ರಮ್ಯಾಗೆ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಹುದ್ದೆಯಿಂದ ಕೊಕ್ ನೀಡಲಾಗಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೆ.ಸಿ ವೇಣುಗೋಪಾಲ್, ರಮ್ಯಾರನ್ನು ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ತೆಗೆದುಹಾಕಲಾಗಿದ್ದು, ಅವರ ಜಾಗಕ್ಕೆ ಗುಜರಾತ್‍ನ ರೋಹನ್ ಗುಪ್ತಾರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಸೋನಿಯಾ ಗಾಂಧಿಯವರೇ ಈ ಹೆಸರನ್ನು ಆಯ್ಕೆ ಮಾಡಿದ್ದಾರೆ ಅಂತಲೂ ಹೇಳಿದ್ದಾರೆ. 2013ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ರಮ್ಯಾ, ನಂತರದಲ್ಲಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನವನ್ನು ಅಲಂಕರಿಸಿದ್ದರು. ಈ ವೇಳೆ ಸದಾ ಒಂದಿಲ್ಲೊಂದು ಹೇಳಿಕೆ ಮೂಲಕ ಸುದ್ದಿಯಾಗಿದ್ದರು.

Contact Us for Advertisement

Leave a Reply