ಬ್ರಾಂಡ್‌ ಮೌಲ್ಯದಲ್ಲಿ ವಿರಾಟ್‌ ಹಿಂದಿಕ್ಕಿದ ರಣವೀರ್‌ ಸಿಂಗ್‌!

masthmagaa.com:

ಚಿತ್ರವಿಚಿತ್ರ ಬಟ್ಟೆ, ವಿಶೇಷ ಮ್ಯಾನರಿಸಂನ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಕಳೆದ ಒಂದು ವರ್ಷದಲ್ಲಿ ಮೂರು ಹೊಸ ಬ್ರಾಂಡ್‌ಗಳಿಗೆ ರಾಯಭಾರಿಯಾಗಿ ನೇಮಕ ಆಗಿದ್ದಾರೆ. ಈ ಮೂಲಕ ಅವರು ಸಹಿ ಹಾಕಿರುವ ಬ್ರ್ಯಾಂಡ್‌ಗಳ ಒಟ್ಟು ಸಂಖ್ಯೆ ಬರೋಬ್ಬರಿ 43ಕ್ಕೆ ಏರಿಕೆಯಾಗಿದೆ. ಇದ್ರೊಂದಿಗೆ ಅತಿ ಹೆಚ್ಚು ಬ್ರ್ಯಾಂಡ್ ಪೋರ್ಟ್‌ಫೋಲಿಯೊ ಹೊಂದಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ರಣ್ವೀರ್‌ ಸಿಂಗ್‌ ಬ್ರಾಂಡ್‌ ಪಟ್ಟಿಗೆ ಈಗ ಡುಕಾಟಿ, ಟಿಫಾನಿ, ಪೆಪ್ಸಿ ಸೇರಿಕೊಂಡಿವೆ. 2022ರಲ್ಲಿ ರಣವೀರ್‌ ಸಿಂಗ್ ಅವರ ಬ್ರ್ಯಾಂಡ್ ಮೌಲ್ಯ 181.7 ಮಿಲಿಯನ್‌ ಡಾಲರ್‌ (ಸುಮಾರು 1,500 ಕೋಟಿ ರೂ.) ಇತ್ತು. 2021ರಿಂದ ಬಾಲಿವುಡ್‌ ಕುಂಟುತ್ತಿದೆಯಾದರೂ ರಣವೀರ್ ಸಿಂಗ್ ಮಾತ್ರ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳನ್ನು ಬುಟ್ಟಿಗೆ ಹಾಕೊಂಡು ಮುನ್ನುಗ್ಗುತ್ತಿದ್ದಾರೆ.

-masthmagaa.com

Contact Us for Advertisement

Leave a Reply