ಚಿಲಿಯಲ್ಲಿ 4 ಜಾತಿಯ ಡೈನೋಸಾರ್‌ಗಳ ಅವಶೇಷ ಪತ್ತೆ!

masthmagaa.com:

ಚಿಲಿಯ ಪ್ಯಾಟಗೋನಿಯ ಪ್ರದೇಶದಲ್ಲಿ ನಾಲ್ಕು ಜಾತಿಯ ಡೈನೋಸಾರ್‌ಗಳ ಅವಶೇಷ ಪತ್ತೆಯಾಗಿವೆ. ಪಳೆಯುಳಿಕೆಗಳು ಅರ್ಜೆಂಟೀನಾದ ಗಡಿಯ ಹತ್ತಿರವಿರೋ ದಕ್ಷಿಣ ಚಿಲಿಯ ಲಾಸ್ ಚೈನಾಸ್ ಕಣಿವೆಯಲ್ಲಿರೋ ಸೆರೊ ಗೈಡೋದಲ್ಲಿ ಕಂಡುಬಂದಿವೆ. ಇವುಗಳನ್ನ 2021ರಲ್ಲೇ ಲ್ಯಾಬ್‌ಗೆ ತೆಗೆದುಕೊಂಡು ಹೋಗಲಾಗಿತ್ತು. ಇದೀಗ ಈ ಪಳೆಯುಳಿಕೆಗಳು ಹಿಂದೆಂದೂ ಸಿಕ್ಕಿರದ ನಾಲ್ಕು ಜಾತಿಯ ಪ್ರಬೇಧಗಳ ಅವಶೇಷ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಈ ಸಂಶೋಧನೆಯನ್ನ ಚಿಲಿ ವಿಶ್ವವಿದ್ಯಾಲಯ ಮತ್ತು ಟೆಕ್ಸಾಸ್‌ ವಿಶ್ವವಿದ್ಯಾಲಯ ಜಂಟಿಯಾಗಿ ಕೈಗೊಂಡಿವೆ. ಅಂದ್ಹಾಗೆ ಥೆರೋಪಾಡ್ ಕುಟುಂಬಕ್ಕೆ ಸೇರಿದ ಮೆಗಾರಾಪ್ಟರ್ ಸೇರಿದಂತೆ ನಾಲ್ಕು ಜಾತಿಯ ಡೈನೋಸಾರ್‌ಗಳ ಹಲ್ಲುಗಳು ಮತ್ತು ಪೋಸ್ಟ್‌ಕ್ರೇನಿಯಲ್ ಮೂಳೆಗಳು ದೊರಕಿದ್ವು ಅಂತ ವಿಜ್ಞಾನಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply