ಸುಶಾಂತ್ ಕೇಸ್​​ಗೆ ಟ್ವಿಸ್ಟ್: ಸಹೋದರಿ ಮತ್ತು ವೈದ್ಯನ ವಿರುದ್ಧ ರಿಹಾ ದೂರು

masthmagaa.com:

ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ಸಿಂಗ್, ವೈದ್ಯ ತರುಣ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಬಾಲಿವುಡ್ ನಟಿ ರಿಹಾ ಚಕ್ರಬರ್ತಿ ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ. ಈ ಮೂಲಕ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಲಕ್ಷಣ ಕಾಣುತ್ತಿದೆ.

ರಿಹಾ ಚಕ್ರಬರ್ತಿ ನೀಡಿದ ದೂರಿನಲ್ಲಿ ‘ದೆಹಲಿಯ ಆರ್​ಎಂಎಲ್​ ಆಸ್ಪತ್ರೆ ವೈದ್ಯ ತರುಣ್ ಕುಮಾರ್ ಶಿಫಾರಸು ಮಾಡಿದ ಔಷಧಿಯನ್ನು ಪ್ರಿಯಾಂಕಾ ಸಿಂಗ್​ ತಮ್ಮ ಸಹೋದರ ಸುಶಾಂತ್​ಗೆ ನೀಡಿದ್ದರು. ಆ ಔಷಧಿಯು ನಾರ್ಕೊಟಿಕ್ ಡ್ರಗ್ಸ್​ ಅಂಡ್ ಸೈಕೋಟ್ರೊಫಿಕ್ ಸಬ್​ಸ್ಟ್ಯಾನ್ಸಸ್​ ಆ್ಯಕ್ಟ್​-1985ರ ಅಡಿಯಲ್ಲಿ ನಿಷೇಧಿಸಲ್ಪಟ್ಟಿದೆ. ಈ ಔಷಧಿಯನ್ನು ಪಡೆದ 5 ದಿನದಲ್ಲಿ ಸುಶಾಂತ್ ಮೃತಪಟ್ಟಿದ್ದಾರೆ’ ಅಂತ ಉಲ್ಲೇಖಿಸಿದ್ದಾರೆ.

ಜೊತೆಗೆ ಡಾ. ತರುಣ್ ಕುಮಾರ್ ಶಿಫಾರಸು ಮಾಡಿದ ಡ್ರಗ್​ ಟೆಲಿಮೆಡಿಸಿನ್ ಪ್ರಾಕ್ಟಿಸ್ ಗೈಡ್​ಲೈನ್ಸ್​-2020ರ ಅಡಿಯಲ್ಲಿ ವಿದ್ಯುನ್ಮಾನವಾಗಿ ಶಿಫಾರಸು ಮಾಡುವುದನ್ನ ನಿಷೇಧಿಸಿದೆ ಅಂತ ರಿಹಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಪ್ರಿಯಾಂಕಾ ಸಿಂಗ್ ಮತ್ತು ವೈದ್ಯ ತರುಣ್ ಕುಮಾರ್ ವಿರುದ್ಧ ಐಪಿಸಿ ಮತ್ತು ಸಂಬಂಧಪಟ್ಟ ಕಾಯ್ದೆಗಳ ಅಡಿಯಲ್ಲಿ ಎಫ್​ಐಆರ್ ದಾಖಲಿಸುಂತೆ ದೂರು ನೀಡಿದ್ದಾರೆ.

-masthmagaa.com

Contact Us for Advertisement

Leave a Reply