ರಾಜ್ಯ ಸರ್ಕಾರದ ವಿರುದ್ಧ ಕಮಿಷನ್‌ ಆರೋಪ ಮಾಡಿಲ್ಲ ಎಂದ ಗುತ್ತಿಗೆದಾರರ ಸಂಘದ ಅಧ್ಯಕ್ಷ!

masthmagaa.com:

ರಾಜ್ಯ ಸರ್ಕಾರದ ವಿರುದ್ಧ ಯಾರೂ ಕಮಿಷನ್ ಆರೋಪವನ್ನ ಮಾಡಿಲ್ಲ ಅಂತ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವ್ರು ಹೇಳಿದ್ದಾರೆ. ಆದ್ರೆ ಆಗಸ್ಟ್ 31ರೊಳಗೆ ಗುತ್ತಿಗೆದಾರರಿಗೆ ಬಾಕಿ ಮೊತ್ತ ಬಿಡುಗಡೆ ಮಾಡಬೇಕು ಅಂತ ಸರ್ಕಾರವನ್ನ ಒತ್ತಾಯಿಸಿದ್ದಾರೆ. ಕಳೆದ 7 ತಿಂಗಳಿಂದ ಬಾಕಿ ಹಣ ಬರಬೇಕು. ಈಗಾಗಲೇ ಒಂದಷ್ಟು ಹಣ ಬಿಡುಗಡೆ ಆಗಿದೆ. ಆದ್ರೆ ನೂರು ಕೋಟಿ ರೂಪಾಯಿ ಸಾಲಲ್ಲ. ಎಲ್ಲರೂ ಮುಂದಿನ ವಾರ, ಕೆಲವೇ ದಿನ ಎಂದು ಸಬೂಬು ಹೇಳುತ್ತಾ ಬಂದಿದ್ದಾರೆ. ಸರ್ಕಾರ 28-06-2023 ಮತ್ತು 30-07-2023 ರಂದು ಗುತ್ತಿಗೆದಾರರ ಬಾಕಿ ಮೊತ್ತವನ್ನು ಹಣ ಬಿಡುಗಡೆ ಮಾಡುವುದು ಅಂತ ಸುತ್ತೋಲೆ ಹೊರಡಿಸಿದೆಯಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಸಂಬಂಧಪಟ್ಟ ಸಚಿವರಿಂದ ಆದೇಶ ಬಂದಿಲ್ಲ ಅಂತ ಅಧಿಕಾರಿಗಳು ಹೇಳ್ತಿದ್ದಾರೆ. ನಮ್ಮ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, 25 ಸಾವಿರ ಕೋಟಿ ರೂಪಾಯಿ ಬಾಕಿಯಿದೆ. ಸರ್ಕಾರ ಎಲ್ಲರಿಗೂ ಭಾಗ್ಯಗಳನ್ನು ಕೊಡುತ್ತಿದೆ. ನಾವು ಕೆಲಸ ಮಾಡಿರುವುದಕ್ಕೆ ನಮಗೂ ಭಾಗ್ಯ ಕೊಡಿ, ಸರ್ಕಾರ ಬಂದು ಮೂರು ತಿಂಗಳಾದರೂ ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ ಅಂತ ಕೆಂಪಣ್ಣ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply