ದೇಶದ ಜೈಲುಗಳಲ್ಲಿ ಎಷ್ಟು ಮಂದಿ ಕೈದಿ ಇದ್ದಾರೆ.? ಮಹಿಳೆಯರೆಷ್ಟು?

masthmagaa.com:

137 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಒಳ್ಳೆಯವರೂ ಇದಾರೆ ಕ, ಕೆಟ್ಟವರೂ ಇದಾರೆ. ಸಮಾಜ ಅಂದ್ಮೇಲೆ ಎಲ್ಲಾ ಥರದವರೂ ಇರ್ತಾರೆ. ಆದ್ರೆ ನಿಮಗ್ಗೊತ್ತಾ ಈ ದೇಶದಲ್ಲಿ ಎಷ್ಟು ಜನ ಜೈಲುಗಳಲ್ಲಿ ವಾಸ ಮಾಡ್ತಿದಾರೆ ಅಂತ. ಈ ವಿಚಾರ ಸಂಬಂಧ ಇವತ್ತು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. 2019ರ ಡಿಸೆಂಬರ್ 31ರ ವರೆಗಿನ ಲೆಕ್ಕದ ಪ್ರಕಾರ ಭಾರತದ ಜೈಲುಗಳಲ್ಲಿ 4,78,600 ಕೈದಿಗಳಿದ್ರು. ಇದರಲ್ಲಿ 1,44,125 ಕೈದಿಗಳು ಘೋಷಿತ ಅಪರಾಧಿಗಳು. ಉಳಿದ 3,30,487 ಕೈದಿಗಳು ವಿಚಾರಣೆ ಎದುರಿಸುತ್ತಿದ್ದ ಕೈದಿಗಳು. ಹಾಗಾದ್ರೆ ಈ ಟೋಟಲ್ ಹತ್ರತ್ರ 5 ಲಕ್ಷ ಕೈದಿಗಳಲ್ಲಿ ಲೇಡೀಸ್ ಎಷ್ಟು, ಜೆಂಟ್ಸ್ ಎಷ್ಟು? ಲೇಡೀಸ್ ತುಂಬಾ ಏನಿಲ್ಲ. ಜಸ್ಟ್ 19,913 ಜನ ಇದಾರೆ. ಇಡೀ ದೇಶದಲ್ಲಿ.

-masthmagaa.com

Contact Us for Advertisement

Leave a Reply