“ಕಾಂತಾರ-2” ಬದಿಗಿಟ್ಟು ಸಿನಿಮಾ ನಿರ್ಮಾಣಕ್ಕೆ ಮುಖ ಮಾಡಿದ ರಿಷಬ್‌ ಶೆಟ್ಟಿ

masthmagaa.com:

ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ ಈಗಾಗಲೇ ಸಾಕಷ್ಟು ಸಿನಿಮಾವನ್ನ ನಿರ್ಮಾಣ ಮಾಡಿ ಗೆದ್ದಿದ್ದಾರೆ. ʻಕಾಂತಾರʼ ಪಾರ್ಟ್ 2 ನಿರ್ದೇಶನ ಮಾಡುವ ಮೊದಲೇ ನಿರ್ಮಾಣದತ್ತ ರಿಷಬ್ ಮನಸುಮಾಡಿದ್ದಾರೆ. ಪ್ರಮೋದ್‌ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ `ಲಾಫಿಂಗ್ ಬುದ್ಧ’ ಚಿತ್ರ ನಿರ್ಮಾಣ ಮಾಡುವುದಾಗಿ 3 ವರ್ಷಗಳ ಹಿಂದೆಯೇ ಅನೌನ್ಸ್ ಆಗಿತ್ತು. ಇದೀಗ ಈ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ `ಲಾಫಿಂಗ್ ಬುದ್ಧ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಿದೆ. ದೇಹ ತೂಕ ಹೆಚ್ಚಿಸಿಕೊಂಡಿರುವ ಪೊಲೀಸ್ ಪೇದೆಯೊಬ್ಬನ ಜೀವನದಲ್ಲಿ ನಡೆಯುವ ಕಥೆ ಮತ್ತು ಅದರ ತಿರುವುಗಳನ್ನು ಕತೆ ಒಳಗೊಂಡಿದೆ. ಹಾಸ್ಯದ ಜೊತೆ ಎಮೋಷನಲ್ ದೃಶ್ಯಗಳನ್ನ ಚಿತ್ರ ಒಳಗೊಂಡಿದೆ. ಚಿತ್ರದಲ್ಲಿ ಪೊಲೀಸ್‌ ಪೇದೆ ಪಾತ್ರದಲ್ಲಿ ಪ್ರಮೋದ್‌ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಲಾಫಿಂಗ್‌ ಬುದ್ಧ ಚಿತ್ರದ ಬಗ್ಗೆ ಫೋಟೊ ಒಂದನ್ನ ಶೇರ್‌ ಮಾಡಿ “ಲಾಫಿಂಗ್‌ ಬುದ್ಧ” ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭ, ಎಂದಿನಂತೆ ನಿಮ್ಮ ಆಶೀರ್ವಾದ ತಂಡದ ಮೇಲೆ ಇರಲಿ” ಎಂದು ರಿಷಬ್‌ ಶೆಟ್ಟಿ ತಮ್ಮ ಇನಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply