ಇಸ್ಲಾಂ ಉಗ್ರಗಾಮಿಗಳನ್ನ ತಡೆಯೋಕೆ ಸುನಕ್‌ ಸರ್ಕಾರ ಹೊಸ ಪ್ಲಾನ್‌!

masthmagaa.com:

ರಿಷಿ ಸುನಾಕ್‌ ನೇತೃತ್ವದ ಬ್ರಿಟನ್‌ ಸರ್ಕಾರ ಈಗ ದೊಡ್ಡ ನಿರ್ಧಾರ ತಗೋಳೋಕೆ ಮುಂದಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇಂಡೊನೇಷ್ಯಾದಿಂದ ಬರುವ ಉಗ್ರ ಭಾಷಣಕಾರರಿಗೆ ತಡೆ ಒಡ್ಡೋಕೆ ಪ್ಲಾನ್‌ ಹಾಕ್ತಿದೆ. ಬ್ರಿಟನ್‌ನಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾಗ್ತಿದ್ದು, ಇದನ್ನ ತಡೆಯೋಕೆ ಈ ಕ್ರಮ ಅಂತ ಬ್ರಿಟನ್‌ ಅಧಿಕಾರಿಗಳು ಹೇಳ್ತಿದ್ದಾರೆ.. ʻದೇಶದ ಮೌಲ್ಯಗಳನ್ನ ದುರ್ಬಲಗೊಳಿಸೋ ಉದ್ದೇಶ ಹೊಂದಿರೋ ಜನರು ಇಲ್ಲಿಗೆ ಎಂಟ್ರಿ ಕೊಡೋದನ್ನ ತಡೆಯೋ ಕಡೆ ನಾವು ಕೆಲಸ ಮಾಡ್ತೀವಿ. ವೀಸಾ ಮೂಲಕ ಬ್ರಿಟನ್‌ಗೆ ಬಂದು ಇಲ್ಲಿ ದ್ವೇಷ ಹರಡಿ, ಬೆದರಿಕೆ ನೀಡೋ ಕೆಲಸ ಮಾಡಿದ್ರೆ ಅವ್ರನ್ನ ಬ್ರಿಟನ್‌ನಿಂದ ಹೊರ ಹಾಕೋಕೆ ಸೂಚಿಸಲಾಗಿದೆ. ನಮ್ಮ ಮಧ್ಯೆ ಒಡಕು ಉಂಟು ಮಾಡೋ ಉಗ್ರಗಾಮಿಗಳನ್ನ ನಾವು ಎದುರಿಸ್ಬೇಕು. ಉಗ್ರಗಾಮಿ ಚಟುವಟಿಕೆಗಳನ್ನ ನಾವು ಎಳ್ಳಷ್ಟು ಸಹಿಸೋದಿಲ್ಲ ಹಾಗೂ ನಮ್ಮ ದೇಶದಲ್ಲಿ ಅದಕ್ಕೆ ಜಾಗವಿಲ್ಲʼ ಅಂತ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಹೇಳಿದ್ದಾರೆ. ಅಲ್ದೆ ಇದರ ಭಾಗವಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ, ಹಾಗೂ ಇಂಡೋನೇಷ್ಯಾದಿಂದ ಬರುವ ದ್ವೇಷ ಭಾಷಣಕಾರರನ್ನ ವೀಸಾ ವಾರ್ನಿಂಗ್‌ ಲಿಸ್ಟ್‌ನಲ್ಲಿ ಸೇರಿಸೋಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply