UK ಏಷ್ಯನ್‌ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಬಾರಿ ರಿಷಿ ಸುನಾಕ್‌ ಮತ್ತು ಪತ್ನಿ ಅಕ್ಷತಾ ಮೂರ್ತಿ ಹೆಸರು!

masthmagaa.com:

ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಾಕ್‌ ಮತ್ತು ಅವ್ರ ಪತ್ನಿ ಅಕ್ಷತಾ ಮೂರ್ತಿ ಯುಕೆಯಲ್ಲಿರೊ ʻಏಷ್ಯನ್‌ ಶ್ರೀಮಂತರ ಪಟ್ಟಿ 2022ʼರಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ. ದಂಪತಿಗಳಿಬ್ರು ಸೇರಿ ಅಂದಾಜು 790 ಮಿಲಿಯನ್‌ ಪೌಂಡ್ಸ್‌ ಅಂದ್ರೆ ಸುಮಾರು 7.7 ಸಾವಿರ ಕೋಟಿ ರೂಪಾಯಿ ಸಂಪತ್ತನ್ನ ಹೊಂದಿದ್ದು, ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದ್ದಾರೆ. ಈ ವರ್ಷದ ಪಟ್ಟಿಯಲ್ಲಿ ಇರೋರ ಒಟ್ಟು ಸಂಪತ್ತು 113 ಬಿಲಿಯನ್‌ ಪೌಂಡ್ಸ್‌ ಅಂದ್ರೆ ಸುಮಾರು 11 ಲಕ್ಷ ಕೋಟಿ ರೂಪಾಯಿ. ಹಾಗೂ ಕಳೆದ ವರ್ಷಕ್ಕಿಂತ 13.5 ಬಿಲಿಯನ್‌ ಪೌಂಡ್ಸ್‌ ಅಂದ್ರೆ ಸುಮಾರು 1.3 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ ಅಂತ ವರದಿಯಾಗಿದೆ. ಅಂದ್ಹಾಗೆ ಈ ಪಟ್ಟಿಯಲ್ಲಿ ಸತತ 8 ನೇ ಬಾರಿಗೆ ಹಿಂದೂಜ ಫ್ಯಾಮಿಲಿ ಮೊದಲ ಸ್ಥಾನದಲ್ಲಿದೆ. ಈ ಕುಟುಂಬ ಅಂದಾಜು 30 ಬಿಲಿಯನ್‌ ಪೌಂಡ್ಸ್‌ ಅಂದ್ರೆ ಸುಮಾರು 2.9 ಲಕ್ಷ ಕೋಟಿ ಸಂಪತ್ತನ್ನ ಹೊಂದಿದೆ. ಹಾಗೂ ಇವರ ಆಸ್ತಿಯಲ್ಲಿ ಕಳೆದ ವರ್ಷಕ್ಕಿಂತ 3 ಬಿಲಿಯನ್‌ ಪೌಂಡ್ಸ್‌ ಅಂದ್ರೆ ಸುಮಾರು 29 ಸಾವಿರ ಕೋಟಿ ರೂಪಾಯಿ ಹೆಚ್ಚಳವಾಗಿದೆ ಅಂತ ಪಟ್ಟಿಯ ಅಂಕಿ ಅಂಶದಿಂದ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply