ಬ್ರಿಟನ್‌ ಶಾಲೆಗಳಲ್ಲಿ ಮೊಬೈಲ್‌ ಬ್ಯಾನ್‌! ರಿಷಿ ಸುನಕ್‌ಗೆ ಟೀಕೆ!

masthmagaa.com:

ಬ್ರಿಟನ್‌ ಶಾಲೆಗಳಲ್ಲಿ ಮೊಬೈಲ್‌ ಫೋನ್‌ಗಳನ್ನ ಬ್ಯಾನ್‌ ಮಾಡೋ ವಿಚಾರ ಪ್ರಮೋಟ್ ಮಾಡಿ ಪ್ರಧಾನಿ ರಿಷಿ ಸುನಾಕ್‌ ಟೀಕೆಗೆ ಒಳಗಾಗಿದ್ದಾರೆ.‌ ಮೊಬೈಲ್‌ ಫೋನ್‌ಗಳು ಶಾಲಾ ವಿದ್ಯಾರ್ಥಿಗಳಿಗೆ ಡಿಸ್‌ಟ್ರ್ಯಾಕ್ಟ್‌ ಮಾಡುತ್ವೆ ಅನ್ನೋ ಸಂದೇಶ ಇರೋ ವೀಡಿಯೋ ಒಂದನ್ನ ಸುನಾಕ್‌ ಪೋಸ್ಟ್‌ ಮಾಡಿದ್ರು. ಅದ್ರಲ್ಲಿ ಹಲವು ಶಾಲೆಗಳಲ್ಲಿ ಮೊಬೈಲ್‌ ಫೋನ್‌ಗಳು ಬ್ಯಾನ್‌ ಆಗಿವೆ. ಉಳಿದ ಶಾಲೆಗಳಲ್ಲೂ ಇದೇ ರೂಲ್ಟ್‌ ಫಾಲೋ ಆಗೋದರ ಬಗ್ಗೆ ನಾವು ಕ್ರಮ ತಗೊಳ್ಳೋಕೆ ಚಿಂತನೆ ನಡೆಸಿದ್ದೇವೆ ಅಂದಿದ್ರು. ಇದಕ್ಕೆ ಈಗ ಬ್ರಿಟನ್‌ನಲ್ಲಿ ಪರ ವಿರೋಧಗಳು ವ್ಯಕ್ತವಾಗಿವೆ. ಸುನಾಕ್‌ ಮುಖ್ಯವಾದ ಸಮಸ್ಯೆಗಳನ್ನ ಬಿಟ್ಟು, ಅನಾವಶ್ಯಕ ವಿಚಾರಗಳಿಗೆ ತಲೆ ಕೆಡಿಸಿಕೊಳ್ತಿದ್ದಾರೆ ಅಂತ ಲೇಬರ್‌ ಪಾರ್ಟಿ ಟೀಕಿಸಿದೆ.

-masthmagaa.com

Contact Us for Advertisement

Leave a Reply