ನಂಜನಗೂಡಿನಲ್ಲಿ ಮುಂದಿನ ಸಿನಿಮಾ ಬಗ್ಗೆ ಅಪಡೇಟ್‌ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್!

masthmagaa.com:

ಯಶ್‌ 19 ಬಗ್ಗೆ ಸಾಕಷ್ಟು ಜನರಲ್ಲಿ ಕ್ಯೂರಿಯಾಸಿಟಿ ಇದೆ. ಆದ್ರೆ ಯಶ್‌ ಮಾತ್ರ ಸದ್ಯ ಅನೌನ್ಸ್‌ ಮಾಡ್ತಾ ಇಲ್ಲ. ಇಂದು ಯಶ್ ಕುಟುಂಬದ ಜೊತೆ ನಂಜನಗೂಡಿಗೆ ಭೇಟಿ ಕೊಟ್ಟ ಸಮಯದಲ್ಲಿ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

‘ಯಶ್ 19 ಬಗ್ಗೆ ಹೇಳಿ’ ಅಂತ ಯಶ್ ಅವರನ್ನು ಕೇಳಲಾಯಿತು. ಇದಕ್ಕೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ‘ಹೀಗೆಲ್ಲಾ ಅದನ್ನು ಅನೌನ್ಸ್ ಮಾಡೋಕೆ ಆಗುತ್ತಾ? ಜನ ನನಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಅವರು ಕೊಡೋ ದುಡ್ಡಿಗೆ ವ್ಯಾಲ್ಯೂ ಇರಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ಜಗತ್ತು ನೋಡುತ್ತಾ ಇದೆ. ಆದಷ್ಟು ಬೇಗ ಹೇಳ್ತೀವಿ. ಜನರು ದುಡ್ಡುಕೊಟ್ಟು ಸಿನಿಮಾ ನೋಡ್ತಾರೆ. ಅವರು ಕೊಡುವ ಹಣಕ್ಕೆ ಬೆಲೆ ಕೊಡಬೇಕು. ಬಹಳ ದಿನಗಳಿಂದ ಕೆಲಸ ಮಾಡ್ತಾ ಇದೀವಿ. ಜನರು ಫ್ರೀ ನೋಡ್ತಾರೆ ಎಂದಾಗಿದ್ರೆ ಮನ ಬಂದಂತೆ ಕೆಲಸ ಮಾಡ್ತಾ ಇದ್ದೆ. ಆದರೆ, ಅವರು ಹಣ ಕೊಟ್ಟು ಸಿನಿಮಾ ನೋಡ್ತಾರೆ. ಅವರೇ ನನ್ನನ್ನು ಬೆಳೆಸಿದ್ದು. ನನ್ನ ಮೇಲೆ ಜವಾಬ್ದಾರಿ ಇದೆ. ನಾನು ಒಂದು ದಿನ, ಒಂದು ಕ್ಷಣಾನೂ ವೇಸ್ಟ್ ಮಾಡ್ತಾ ಇಲ್ಲ. ಆದಷ್ಟು ಬೇಗ ಹೇಳ್ತೀನಿ” ಅಂತ ಯಶ್‌ ಹೇಳಿದ್ದಾರೆ.

ನಂತರ ಬಾಲಿವುಡ್‌ಗೆ ಹೋಗ್ತೀರಾ ಅಂತ ಕೇಳಿದ ಪ್ರಶ್ನೆಗೆ “ನಾನು ಎಲ್ಲೂ ಹೋಗಿಲ್ಲ , ನಾನು ಇರೋ ಕಡೆನೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ. ತಲೆ ಕೆಡಿಸಿಕೊಳ್ಳಬೇಡಿ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply