ಫುಟ್‌ಬಾಲ್‌ ಆಟಗಾರ ರೊನಾಲ್ಡೋಗೆ ಭರ್ಜರಿ ಆಫರ್‌ ನೀಡಿದ ಸೌದಿ ಅರೇಬಿಯನ್‌ ಕ್ಲಬ್‌ ಅಲ್‌ ನಸ್ಸರ್‌!

masthmagaa.com:

ಸ್ಟಾರ್‌ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋಗೆ ಭರ್ಜರಿ ಆಫರ್‌ ಬಂದಿದೆ. ಸೌದಿ ಅರೇಬಿಯನ್‌ ಕ್ಲಬ್‌ ಅಲ್‌ ನಸ್ಸರ್‌, ಫಿಫಾ ವರ್ಲ್ಡ್‌ಕಪ್‌ ಮುಗಿದ ನಂತರ 3 ವರ್ಷ ತಮ್ಮ ಕ್ಲಬ್‌ ಪರ ಆಡೋಕೆ 225 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 1.8 ಸಾವಿರ ಕೋಟಿ ರೂಪಾಯಿ ಆಫರ್‌ ನೀಡಿದೆ ಅಂತ ವರದಿಯಾಗಿದೆ. ಈ ಸಂಬಂಧ ಸೌದಿ ಕ್ಲಬ್‌ ಮತ್ತು ರೊನಾಲ್ಡೊ ಸಂಪರ್ಕದಲ್ಲಿದ್ದು, ಈ ಆಫರ್‌ನ್ನ ರೊನಾಲ್ಡೊ ಫೈನಲ್‌ ಮಾಡೋದು ಬಾಕಿ ಇದೆ. ಸೌದಿ ಅರೇಬಿಯನ್‌ ಕ್ಲಬ್‌ ಅಲ್‌ ನಸ್ಸರ್‌, ಏಷ್ಯಾದ ಅತ್ಯಂತ ಯಶಸ್ವಿ ಫುಟ್‌ಬಾಲ್‌ ಕ್ಲಬ್‌ ಆಗಿದ್ದು 9 ಲೀಗ್‌ ಟೈಟಲ್ಸ್‌ನ್ನ ಗೆದ್ದಿದೆ. ಅಂದ್ಹಾಗೆ ಇತ್ತೀಚೆಗೆ ರೊನಾಲ್ಡೊ, ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ ಇಂದ ಹೊರ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್‌ ನಸ್ಸರ್‌ ಈ ಆಫರ್‌ ನೀಡಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply