ಬಿಜೆಪಿ ನಾಯಕರ ಜೊತೆಗೆ ವೇದಿಕೆ ಹಂಚಿಕೊಂಡ ರೌಡಿ ಶೀಟರ್‌..! ಹೇಳಿದ್ದೇನು ಗೊತ್ತಾ?

masthmagaa.com:

ರೌಡಿ ಶೀಟರ್‌ ಇರೋ ಸೈಲೆಂಟ್‌ ಸುನೀಲ್‌ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಚಾಮರಾಜಪೇಟೆಯ ರಕ್ತದಾನ ಶಿಬಿರದಲ್ಲಿ ಬಿಜೆಪಿ ನಾಯಕರ ಸಮ್ಮುಖದಲ್ಲೇ ಈತ ವೇದಿಕೆಯಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ. ಇದೇ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಸಂಸದ ಪಿಸಿ ಮೋಹನ್‌, ಇತರೆ MLAಗಳು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗಿಯಾಗಿದ್ರು ಕಳೆದ ಕೆಲದಿನಗಳ ಹಿಂದೆ ಅನೇಕ ರೌಡಿಶೀಟರ್‌ ಮನೆಗಳ ಮೇಲೆ ರೈಡ್‌ ಮಾಡಲಾಗಿತ್ತು. ಆಗ ಇವರ್ಯಾರು ಕೈಗೆ ಸಿಕ್ಕಿರಲಿಲ್ಲ. ತಲೆಮರೆಸಿಕೊಂಡಿದ್ರು. ಆದ್ರೆ ಈಗ ಪೊಲೀಸರ ಭದ್ರತೆಯಲ್ಲಿಯೇ ಅದ್ದೂರಿ ಕಾರ್ಯಕ್ರಮದಲ್ಲಿ ರೌಡಿ ಶೀಟರ್‌ ಕಾಣಿಸಿಕೊಂಡಿದ್ದಾನೆ. ಹೀಗಾಗಿ ರೌಡಿಗೆ ಪೊಲೀಸರೇ ಎಸ್ಕಾರ್ಟ್‌ ಕೊಟ್ಟಿದ್ದಾರೆ ಅಂತ ಆಕ್ರೋಶ ವ್ಯಕ್ತವಾಗಿದೆ. ಇತ್ತ ‘ನಿನ್ನೆಯ ಕಾರ್ಯಕ್ರಮದಲ್ಲಿ ಸುನೀಲ್ ಇದ್ದದ್ದು ಗೊತ್ತಿದೆ. ಸುನೀಲ್ ಮೇಲೆ ಯಾವುದೇ ಕೇಸ್ ಬಾಕಿ ಉಳಿದಿಲ್ಲ. ಆತನನ್ನ ಕರೆಸಿ ವಿಚಾರಣೆ ನಡೆಸುತ್ತೇವೆ. 9 ರೌಡಿಗಳನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ’ ಅಂತ ಸಿಸಿಬಿ ಮುಖ್ಯಸ್ಥ ಶರಣಪ್ಪ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಆತ ಯಾರು ಏನಾಗಿದೆ ಆ ಹಿನ್ನೆಲೆಗಳನ್ನ ತಿಳಿಯುತ್ತೇವೆ. ಯಾರೋ ಹೇಳಿದ ತಕ್ಷಣ ಸುಮ್ಮನೇ ಎಲ್ಲರನ್ನೂ ಪಕ್ಷಕ್ಕೆ ಕರೆದುಕೊಳ್ಳಲ್ಲ. ಪಕ್ಷ ತೀರ್ಮಾನ ಮಾಡುತ್ತದೆ ಅಂತ ಹೇಳಿದ್ದಾರೆ. ಇನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ ರೌಡಿಶೀಟರ್​ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿ ವಿಚಾರ ಆತನ ಬಗ್ಗೆ ನನಗೆ ಐಡಿಯಾ ಇಲ್ಲ. ನಾನು ನಿನ್ನೆ ಇಡೀ ದಿನ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಸುನಿಲ್​ನ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದುಕೊಳ್ತೀನಿ ಅಂತ ಹೇಳಿಕೆ ನೀಡಿದ್ದಾರೆ. ಇತ್ತ ಬಿಜೆಪಿ ಪಕ್ಷಕ್ಕೆ ರೌಡಿ ಶೀಟರ್‌ ಇರೋ ಫೈಟರ್‌ ರವಿ ಕೂಡ ಸೇರ್ಪಡೆಯಾಗಿದ್ದಾರೆ. ಈಗ ಸೈಲೆಂಟ್‌ ಸುನೀಲ್‌ ಹೆಸರು ಕೇಳಿ ಬರ್ತಿದೆ ಅಂತ ಕೇಳಿದ್ದಕ್ಕೆ ಸಚಿವ ಅಶ್ವಥ್‌ ನಾರಾಯಣ್‌ ಪ್ರತಿಕ್ರಿಯಿಸಿದ್ದಾರೆ. ಶಿಕ್ಷೆಗೆ ಒಳಗಾಗದವರಿಗೆ ಚುನಾವಣೆಗೆ ನಿಲ್ಲುವ ಅವಕಾಶ ಇಲ್ಲ. ಕಾನೂನು ಎಲ್ಲರಿಗೂ ಅನ್ವಯ ಆಗುತ್ತೆ. ಯಾರಿಗೂ ನಾಮಕರಣ ಮಾಡೋದು ಬೇಡ. ಚಾರ್ಚ್‌ ಶೀಟ್‌ ಇಲ್ಲದ ವ್ಯಕ್ತಿಗಳಿಗೆ ಬದುಕೋದಕ್ಕೆ ಅವಕಾಶ ಕೊಡಬೇಕು ಅಂತ ಹೇಳಿದಾರೆ.

-masthmagaa.com

Contact Us for Advertisement

Leave a Reply