RRR ಸಿನಿಮಾಗೆ ಕೋವಿಡ್ ಕಂಟಕ: ಬಿಡುಗಡೆ ದಿನಾಂಕ ಮುಂದೂಡಿಕೆ!

masthmagaa.com:

ಬಾಹುಬಲಿ ಸಿನಿಮಾ ಖ್ಯಾತಿಯ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಬಿಗ್ ಬಜೆಟ್ ಚಿತ್ರ RRR ಬಿಡುಗಡೆಯನ್ನ ಮುಂದೂಡಲಾಗಿದೆ. ಈ ಮೊದಲು ಜನವರಿ 7ರಂದು RRR ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿತ್ತು. ಆದರೆ, ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್‌ಗಳ ಕಾರಣದಿಂದಾಗಿ ಕೆಲವೊಂದು ರಾಜ್ಯಗಳಲ್ಲಿ ಥೇಟರ್ ಬಂದ್ ಮಾಡುವ ನಿರ್ಧಾರವನ್ನ ಕೆಲ ರಾಜ್ಯಗಳು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನ ಮುಂದೂಡಲಾಗಿದೆ.

ಈ ಮೊದಲು ಜನವರಿ 7ಕ್ಕೆ RRR ಚಿತ್ರ ಬಿಡುಗಡೆ ಇದ್ದಿದ್ದರಿಂದ ನಾಳೆ ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಇವೆಂಟನ್ನು ಚಿತ್ರತಂಡ ಇಟ್ಟುಕೊಂಡಿತ್ತು. ಆದರೆ, ಈಗ ಅದು ಕೂಡ ಕ್ಯಾನ್ಸಲ್ ಆಗಿದೆ. ಮುಂದಿನ ಬಿಡುಗಡೆ ದಿನಾಂಕವನ್ನ ಪ್ರಕಟಿಸುವುದಾಗಿ RRR ತಂಡ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದೆ.

-masthmagaa.com

Contact Us for Advertisement

Leave a Reply