ಭಾರತ ಹಿಂದೂ ರಾಷ್ಟ್ರ, ಎಲ್ಲಾ ಭಾರತೀಯರು ಹಿಂದೂಗಳೇ: RSS ಮುಖ್ಯಸ್ಥ

masthmagaa.com:

ಭಾರತ ಹಿಂದೂ ರಾಷ್ಟ್ರ ಹಾಗೂ ಎಲ್ಲಾ ಭಾರತೀಯರು ಹಿಂದೂಗಳೇ ಅಂತ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಕಾರ್ಯಕ್ರಮವೊಂದ್ರಲ್ಲಿ ಮಾತಾಡಿರುವ ಭಾಗವತ್‌, ಭಾರತ ಅಥವಾ ಹಿಂದೂಸ್ತಾನ ಅನ್ನೋದು ಹಿಂದೂ ರಾಷ್ಟ್ರ. ಇದು ವಾಸ್ತವ ಸಂಗತಿ, ಎಲ್ಲ ಭಾರತೀಯರೂ ಹಿಂದೂಗಳೇ. ಹಿಂದೂ ಅಂದ್ರೆ ಭಾರತೀಯ ಅಂತಾನೆ ಅರ್ಥ. ಇವತ್ತು ಭಾರತದಲ್ಲಿ ಇರುವ ಎಲ್ಲರೂ, ಹಿಂದೂ ಸಂಸ್ಕೃತಿ, ಹಿಂದೂ ಪೂರ್ವಜರು ಹಾಗೂ ಹಿಂದೂ ಭೂಮಿಯ ಜೊತೆ ನಂಟು ಹೊಂದಿದ್ದಾರೆ. ಇದರ ಹೊರತಾಗಿ ಮತ್ತೇನೂ ಇಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಕೆಲವರು ಈ ವಿಚಾರಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಈ ಮನಸ್ಥಿತಿಯನ್ನು ಅಳವಡಿಸಿಕೊಂಡಿಲ್ಲ. ಕೆಲವರಿಗೆ ಈ ವಿಚಾರ ಸಂಪೂರ್ಣವಾಗಿ ಅರ್ಥವಾಗಿದೆ. ಆದ್ರೆ ತಮ್ಮ ಹವ್ಯಾಸ ಹಾಗೂ ಸ್ವಾರ್ಥದಿಂದಾಗಿ ಇವುಗಳನ್ನ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಅಂತ ಮೋಹನ್‌ ಭಾಗವತ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply