ಡಾಲರ್‌ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ!

masthmagaa.com:

ಭಾರತೀಯ ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಪ್ರತಿ ಡಾಲರ್‌ ಎದುರು 38 ಪೈಸೆ ಕುಸಿತಗೊಂಡು ಮೊದಲ ಬಾರಿಗೆ ರೂಪಾಯಿ ದರ 81.5 ಆಗಿದೆ. ಇನ್ನು ಈ ರೂಪಾಯಿ ಕುಸಿತಕ್ಕೆ ಏನ್‌ ಕಾರಣ ಅನ್ನೋದನ್ನ ಅಂತ ಈ ಮುಂಚೆಯಿಂದಲೂ ಸಾಕಷ್ಟು ಬಾರಿ ಹೇಳಿದ್ದೀವಿ. ಈಗಲೂ ಚಿಕ್ಕದಾಗಿ ಹೇಳ್ಬೇಕು ಅಂದ್ರೆ ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಸೇರಿದಂತೆ ಇತರ ಜಗತ್ತಿನ‌ ಪ್ರಮುಖ ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿದರ ಅಥ್ವಾ ಇಂಟರೆಸ್ಟ್‌ ರೇಟ್‌ನ್ನ ಹೆಚ್ಚಿಸಿವೆ. ಇದ್ರಿಂದ ರೂಪಾಯಿ ಮೌಲ್ಯ ಗಣನೀಯವಾಗಿ ಕುಸಿಯಲು ಕಾರಣವಾಗಿದೆ.

-masthmagaa.com

Contact Us for Advertisement

Leave a Reply