ಖೇರ್ಸನ್ ನಗರ ರಷ್ಯಾ ವಶವಾಗಿದ್ದು ನಿಜ: ಯುಕ್ರೇನ್

masthmagaa.com:

ನಿನ್ನೆಯಷ್ಟೇ ರಷ್ಯಾ ಖೇರ್ಸನ್ ನಗರ ವಶವಾಗಿದೆ ಅಂತ ಹೇಳಿಕೊಂಡಿತ್ತು. ಅದನ್ನ ಈಗ ಯುಕ್ರೇನ್ ಕೂಡ ಖಚಿತಪಡಿಸಿದೆ. ಮೇಯರ್ ಇಗೊರ್ ಕೋಲಿಖೈಯೆವ್​​ ಪ್ರತಿಕ್ರಿಯಿಸಿ, ಬಂದರು ನಗರವಾದ ಖೇರ್ಸನ್​ನಲ್ಲಿ ರಷ್ಯ ಹಿಡಿತ ಸಾಧಿಸಿದೆ ಅಂತ ಹೇಳಿದ್ದಾರೆ. ಸ್ಥಳೀಯ ಆಡಳಿತದ ಮುಖ್ಯಸ್ಥ ಗೆನ್ನೆಡಿ ಲಕುಟಾ ಪ್ರತಿಕ್ರಿಯಿಸಿ, ರಷ್ಯನ್ ಅತಿಕ್ರಮಣಕಾರರು ಖೇರ್ಸನ್​ನ ಎಲ್ಲಾ ಭಾಗಗಳಲ್ಲಿ ಆವರಿಸಿಕೊಂಡಿದ್ದಾರೆ ಅಂತ ಅಸಹಾಯಕತೆ ತೋರಿಸಿಕೊಂಡಿದ್ದಾರೆ. ಆದ್ರೆ ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಕಚೇರಿ ಕಡೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಅದ್ರಲ್ಲಿ ಇನ್ನೂ ಖೇರ್ಸನ್ ರಷ್ಯಾ ಕಂಟ್ರೋಲ್​ಗೆ ಒಳಗಾಗಿಲ್ಲ. ಫೈಟಿಂಗ್ ನಡೀತಾ ಇದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply