ರಷ್ಯಾ ಪತ್ರಕರ್ತೆಯನ್ನು ಅಮಾನವೀಯವಾಗಿ ಥಳಿಸಿದ ಅಪರಿಚಿತ ಬಂದೂಕುದಾರಿಗಳು!

masthmagaa.com:

ರಿಪಬ್ಲಿಕ್‌ ಆಫ್‌ ಚೆಚೆನ್ಯಾ ಭೇಟಿ ವೇಳೆ ರಷ್ಯಾದ ಇನ್ವೆಸ್ಟಿಗೇಟ್‌ ಪತ್ರಕರ್ತೆ ಎಲೆನಾ ಮಿಲಾಶಿನಾ ಅನ್ನೋರ ಮೇಲೆ ಸಶಸ್ತ್ರದಾರಿಗಳು ಹಲ್ಲೆ ನಡಸಿದ್ದಾರೆ. ಎಲೆನಾ ಅವ್ರ ಮೇಲೆ ಹಲ್ಲೆ ನಡೆಸಿ ಅವ್ರ ತಲೆ ಬೋಳಿಸಿ ಹಸಿರು ಬಣ್ಣ ಬಳಿದು ಚಿತ್ರ ಹಿಂಸೆ ನೀಡಲಾಗಿದೆ. ಎಲೆನಾ ಅವ್ರ ಬೆರಳುಗಳು ಮುರಿದು ಹೋಗಿದ್ದು, ಪ್ರಜ್ಞೆ ಕೂಡ ಕಳೆದುಕೊಂಡಿದ್ದರು. ಇದೀಗ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 4ರಂದು ಮುಂಜಾನೆ ಮಿಲಾಶಿನಾ ಮತ್ತು ಲಾಯರ್‌ ನೆಮೊವ್ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿರೋದು ಗೊತ್ತಾಗಿದೆ. ಜೊತೆಗೆ ಈ ಅಪರಿಚಿತ ಬಂದೂಕುದಾರಿಗಳು ಎಲೆನಾ ಅವ್ರನ್ನ ಅಮಾನವೀಯವಾಗಿ ಥಳಿಸಿದ್ದು, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಅಲ್ದೆ ಅವ್ರ ಬಳಿ ಇದ್ದ ಮೊಬೈಲ್‌ ಸೇರಿದಂತೆ ಇತರ ವಸ್ತುಗಳನ್ನ ಹೊಡೆದು ಹಾಕಿದ್ದಾರೆ. ಇತ್ತ ಘಟನೆಯನ್ನ ರಷ್ಯಾ ಖಂಡಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ತನಿಖೆಯನ್ನ ಪ್ರಾರಂಭಿಸಿರೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply