ರಷ್ಯಾ ವಿರುದ್ಧ ಪ್ರತಿದಾಳಿ ಮಾಡೋಕೆ ಲೇಟ್‌ ಆಗ್ತಿದೆ..ಬೇಗ ಶಸ್ತ್ರಾಸ್ತ್ರ ಕಳಿಸಿ ಎಂದು ಕೇಳಿದ ಝೆಲೆನ್ಸ್ಕಿ!

masthmagaa.com:

ರಷ್ಯಾ, ಯುಕ್ರೇನ್‌ ಮೇಲಿನ ತನ್ನ ದಾಳಿಯನ್ನ ಕಂಟಿನ್ಯೂ ಮಾಡಿದೆ. ಇದೀಗ ಪಶ್ಚಿಮ ಯುಕ್ರೇನ್‌ನ Lviv ಮೇಲೆ ರಾಕೆಟ್‌ ದಾಳಿ ನಡೆಸಿದ್ದು, ಮೂಲಸೌಕರ್ಯಗಳನ್ನ ಹಾನಿಗೊಳಿಸಿದೆ ಅಂತ ಯುಕ್ರೇನ್‌ ಆರೋಪಿಸಿದೆ. ಈ ದಾಳಿಯಲ್ಲಿ ಕನಿಷ್ಠ 3 ಜನ ಗಾಯಗೊಂಡಿದ್ದು, ಅಲ್ಲಿನ ಇನ್‌ಫ್ರಾಸ್ಟಕ್ಚರ್‌ಗಳು ಡ್ಯಾಮೇಜ್‌ ಆಗಿವೆ ಅಂತ ಯುಕ್ರೇನ್‌ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದ್‌ ಕಡೆ ಪಾಶ್ಚಿಮಾತ್ಯ ದೇಶಗಳಿಂದ ಶಸ್ತ್ರಾಸ್ತ್ರಗಳು ಬರೋಕೆ ಲೇಟ್‌ ಆಗ್ತಿದೆ. ಈ ಕಾರಣಕ್ಕೆ ರಷ್ಯಾ ಮೇಲೆ ಪ್ರತಿದಾಳಿ ಮಾಡೋಕೆ ಸಾಧ್ಯವಾಗ್ತಿಲ್ಲ ಅಂತ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿಹೇಳಿದ್ದಾರೆ. ಜೊತೆಗೆ ಯುದ್ಧ ಭೂಮಿಯಲ್ಲಿನ ಕೆಲವು ತೊಂದ್ರೆಗಳಿಂದ ಪ್ರತಿದಾಳಿ ಮಾಡೋಕೆ ವಿಳಂಬವಾಗ್ತಿದೆ. ಇನ್ನು ನಮ್ಮ ಪ್ರತಿದಾಳಿ ಲೇಟ್‌ ಆದ್ರೆ ಸಾವು ನಾವು ಜಾಸ್ತಿಯಾಗೋ ಸಾದ್ಯತೆಯಿದೆ ಅಂತ ನಾನು ಅಮೆರಿಕ ಹಾಗೂ ಯುರೋಪ್‌ ಮಿತ್ರರಾಷ್ಟ್ರಗಳಿಗೆ ತಿಳಿಸಿದ್ದು, ಆದಷ್ಟು ಬೇಗೆ ಶಸ್ತ್ರಾಸ್ತ್ರಗಳನ್ನ ಕಳಿಸುವಂತೆ ಕೇಳಿಕೊಂಡಿದ್ದೇನೆ ಅಂತ ಝೆಲೆನ್ಸ್ಕಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply