ಫ್ರಾನ್ಸ್‌ ಸಚಿವರ ಮಾತಿಗೆ ಗರಂ: ಫ್ರಾನ್ಸ್‌ ರಾಯಭಾರಿಗೆ ರಷ್ಯಾ ಸಮನ್ಸ್!

masthmagaa.com:

ತನ್ನ ದೇಶದಲ್ಲಿರೊ ಫ್ರಾನ್ಸ್‌ ರಾಯಭಾರಿಗೆ ಈಗ ರಷ್ಯಾ ಸಮನ್ಸ್‌ ನೀಡಿದೆ. ಫ್ರಾನ್ಸ್‌ ವಿದೇಶಾಂಗ ಸಚಿವ ಟೆಫನ್‌ ಸರ್ಜನ್‌ ಇತ್ತೀಚಿಗೆ ರಷ್ಯಾ ಜೊತೆ ಯಾವುದೇ ಮಾತುಕತೆ ನಡೆಸೊ ಬಗ್ಗೆ ನಮಗೆ ಆಸಕ್ತಿ ಇಲ್ಲ ಅಂತೇಳಿದ್ರು. ಇದಕ್ಕೆ ಸಿಡಿಮಿಡಿಗೊಂಡಿರೊ ರಷ್ಯಾ, ಈಗ ಫ್ರಾನ್ಸ್‌ ರಾಯಭಾರಿಗೆ ಸಮನ್ಸ್‌ ನೀಡಿ, ಇಂತಹ ಹೇಳಿಕೆಗಳು ಸ್ವೀಕಾರ್ಹವಲ್ಲ ಅಂತೇಳಿದೆ. ಅಂದ್ಹಾಗೆ ಯುಕ್ರೇನ್‌ ಜೊತೆಗಿನ ಯುದ್ದದಿಂದಾಗಿ ರಷ್ಯಾ ಫ್ರಾನ್ಸ್‌ ನಡುವಿನ ಸಂಬಂಧ ಹದಗೆಟ್ಟಿತ್ತು. ನಂತ್ರ ಮಾಸ್ಕೊ ದಾಳಿ ವಿಚಾರವಾಗಿ ರಷ್ಯಾ-ಫ್ರಾನ್ಸ್‌ ನಾಯಕರ ನಡುವೆ ಟಾಕ್‌ ವಾರ್‌ ನಡೆದಿತ್ತು. ಹೀಗಾಗಿ ಫ್ರಾನ್ಸ್‌ ವಿದೇಶಾಂಗ ಸಚಿವರ ಹೇಳಿಕೆಗೆ ರಷ್ಯಾ ಈಗ ಸಮನ್ಸ್‌ ನೀಡಿದೆ.

-masthmagaa.com

Contact Us for Advertisement

Leave a Reply