ರಾಜಧಾನಿ ಕೀಯೆವ್‌ ರಕ್ಷಣೆಗೆ ನಿಂತ ಕೀಯೆವ್‌ ನಾಗರೀಕರು

masthmagaa.com:

ರಷ್ಯಾದ ಸೈನಿಕ ಪಡೆಗಳು ಮಾರಿಯೋಪೊಲ್‌ ನಲ್ಲಿ ಕದನವಿರಾಮ ಉಲ್ಲಂಘನೆ ಮಾಡಿವೆ ಅಂತ ಉಕ್ರೇನ್‌ ಆರೋಪ ಮಾಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಉಕ್ರೇನ್ ನ ಸೇನೆ “ರಷ್ಯಾ ಸೈನಿಕರು ಮಾರಿಯೋಪೋಲ್‌ನಲ್ಲಿ ಜನರು ಹೊರ ಹೋಗ್ತಿರುವ ದಾರಿಯನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡ್ತಿದ್ದಾರೆ.. ಇದರಿಂದ ಸ್ಥಳಾಂತರ ಪ್ರಕ್ರಿಯೆಗೆ ತಡೆಯಾಗ್ತಿದೆ ಅಂತ ಆರೋಪ ಮಾಡಿದೆ. ಇತ್ತ ರಷ್ಯಾದ ಟ್ಯಾಂಕ್​​ಗಳು ಯುಕ್ರೇನ್‌ ರಾಜಧಾನಿ ಕೀಯೆವ್‌ ಕಡೆಗೆ ದಾಂಗುಡಿ ಇಡ್ತಿದ್ರೆ, ಇತ್ತ ಕೀಯೆವ್​​ನಲ್ಲಿ ನಾಗರಿಕರೇ ರಾಜಧಾನಿ ರಕ್ಷಣೆಯ ಸಿದ್ದತೆ ಮಾಡ್ಕೊಳ್ತಿದ್ದಾರೆ.. ಸತತ 5ನೇ ದಿನಗಳಿಂದ ಸುಮಾರು 80 ಕಿಲೋಮೀಟರ್​​ ಕ್ರಮಿಸಿ ಇನ್ನಿಲ್ಲದಂತೆ ಮುನ್ನುಗ್ತಿರೋ ರಷ್ಯಾ ಸೇನೆ ಕೀಯೆವ್‌ ಅನ್ನ ಸಮೀಸ್ತಾನೇ ಇದೆ. ಈ ಭೀತಿಯಿಂದ ಈಗ ರಾಜಧಾನಿಯ ಚೆಕ್‌ ಪಾಯಿಂಟ್​​ಗಳನ್ನು ಬಂದ್‌ ಮಾಡಲಾಗ್ತಿದ್ದು ಅದಕ್ಕೆ ಉಕ್ರೇನ್‌ ನಾಗರೀಕರೇ ಹೆಲ್ಪ್‌ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply