ಮಾರಿಯೋಪೋಲ್​ನಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ!

masthmagaa.com:

ರಷ್ಯಾದ ಬಂದರುನಗರ ಮಾರಿಯೋಪೋಲ್​ ಸುತ್ತಲೂ ಸೇನೆ ಸುತ್ತುವರಿದಿದ್ದು, ಅಲ್ಲಿರೋ ಜನರಿಗೂ ಹೊರಹೋಗಲು ಬಿಡ್ತಿಲ್ಲ.. ಅಲ್ಲಿಗೆ ಅಗತ್ಯ ವಸ್ತುಗಳ ಪೂರೈಕೆಗೂ ಬಿಡ್ತಿಲ್ಲ. ಆ ರೀತಿಯಲ್ಲಿ ಸುತ್ತುವರಿದು ರಷ್ಯಾ ಹಾವಳಿ ಇಡ್ತಿದೆ. ಈವರೆಗೆ ಮಾರಿಯೋಪೋಲ್ ಒಂದ್ರಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳ್ಕೊಂಡಿದ್ದಾರೆ ಅಂತ ಯುಕ್ರೇನ್ ಕೂಡ ಆರೋಪ ಮಾಡಿದೆ. ಇದ್ರ ಬೆನ್ನಲ್ಲೇ ಮಾರಿಯೋಪೋಲ್​​ನಲ್ಲಿ ಒಂದು ದಿನದ ಮಟ್ಟಿಗೆ ಕದನ ವಿರಾಮ ಘೋಷಿಸ್ತಿದ್ದೀವಿ ಅಂತ ಹೇಳಿದೆ. ಕಳೆದೊಂದು ತಿಂಗಳಿಂದಲೂ ಇಲ್ಲಿ ಜನ ಸಿಲುಕಿ ಪರದಾಡ್ತಿದ್ದು, ಅವರೆಲ್ಲರೂ ಸುರಕ್ಷಿತವಾಗಿ ಸ್ಥಳಾಂತರಗೊಳ್ಳಲು ಅವಕಾಶ ನೀಡ್ತೀವಿ ಅಂತ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply