ತನ್ನ ಸೇನೆಯ ಮೇಲೆಯೇ ರಷ್ಯಾ ಅಧ್ಯಕ್ಷ ಪುಟಿನ್​​ಗೆ ಸಿಟ್ಟು!

masthmagaa.com:

ಯುಕ್ರೇನ್‌ ವಾರ್‌ನಲ್ಲಿ ತನ್ನ ಸೇನೆಯೇ ತನ್ನ ದಿಕ್ಕುತಪ್ಪಿಸಿದೆ ಅಂತ ಪುಟಿನ್‌ ಈಗ ಗರಂ ಆಗಿದ್ದಾರೆ ಅಂತ ಅಮೇರಿಕದ ಅಧಿಕಾರಿ ಕೇಟ್‌ ಬೆಡಿಂಗ್‌ಫೀಲ್ಡ್‌ ಹೇಳಿದ್ದಾರೆ. ಗುಪ್ತಚರ ಮಾಹಿತಿ ಆಧರಿಸಿ ಮಾತಾಡಿರೋ ಅವ್ರು, ಪುಟಿನ್‌ಗೆ ತನ್ನ ಸೇನೆಯೇ ದಾರಿತಪ್ಪಿಸ್ತು ಅಂತ ಅನ್ಸಿದೆ. ತನ್ನ ಜೆನರಲ್‌ಗಳ ಮೇಲೆ ಅಪನಂಬಿಕೆ ಹುಟ್ಟಿದೆ ಅಂತ ಹೇಳಿದ್ದಾರೆ. ಬ್ರಿಟನ್‌ನ ಗುಪ್ತಚರ ಅಧಿಕಾರಿ ಜರೆಮಿ ಫ್ಲೆಮಿಂಗ್‌ ಕೂಡ ಇದೇ ರೀತಿ ಹೇಳಿದ್ದು, ಯುಕ್ರೇನ್‌ ವಿರುದ್ಧದ ಯುದ್ಧದ ಸ್ಟ್ರಾಟಜಿ ವಿಫಲ ಆಗುತ್ತೆ ಅಂತ ಪುಟಿನ್‌ಗೆ ಹೇಳೋಕೆ ಅವರ ಸಲಹೆಗಾರರು ಹೆದರಿಕೊಂಡಿದ್ದಾರೆ ಅಂತ ಹೇಳಿದ್ದಾರೆ. ಕ್ಯಾನ್‌ಬೆರಾದ ಆಸ್ಟ್ರೇಲಿಯನ್‌ ನ್ಯಾಷನಲ್‌ ಯೂನಿವರ್ಸಿಟಿಯಲ್ಲಿ ಮಾತಾಡಿರೋ ಅವ್ರು, ಯುಕ್ರೇನ್‌ ಈ ಮಟ್ಟದಲ್ಲಿ ಪ್ರತಿರೋಧ ತೋರುತ್ತೆ, ತನ್ನ ವಿರುದ್ಧ ಅಂತರಾಷ್ಟ್ರೀಯ ಒಗ್ಗಟ್ಟು ಈ ರೀತಿ ಇರುತ್ತೆ, ಸ್ಯಾಂಕ್ಷನ್‌ಗಳ ಪರಿಣಾಮ ಈ ಪ್ರಮಾಣದಲ್ಲಿ ಇರುತ್ತೆ ಅಂತ ಪುಟಿನ್‌ ಅಂದಾಜಿಸರಲಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply