ಬೇರೊಬ್ಬರ ಪ್ರಾಣ ಉಳಿಸಲು ಹೋಗಿ ಪ್ರಾಣ ಬಿಟ್ಟ ರಷ್ಯಾ ಸಚಿವ!

masthmagaa.com:

ರಷ್ಯಾದ ಎಮರ್ಜೆನ್ಸಿ ಸಚಿವ ಯ್ವಜೆನಿ ಝಿನಿಚೆವ್ ಇನ್ನೊಬ್ಬರ ಪ್ರಾಣ ಉಳಿಸಲು ಹೋಗಿ ತಾವೇ ಪ್ರಾಣ ಕಳೆದುಕೊಂಡಿದ್ದಾರೆ. ಹಿಮಚ್ಚಾದಿತ ಆರ್ಕ್ಟಿಕ್ ಪ್ರದೇಶದಲ್ಲಿ ಡ್ರಿಲ್ ನಡೀತಿತ್ತು. ಆಗ ಸಂದರ್ಶನವೊಂದರ ವೇಳೆ ಕ್ಯಾಮರಾಮನ್ ಒಬ್ಬರು ಹಿಮದಲ್ಲಿ ಜಾರಿ ಹೋದರು. ಅವರನ್ನ ಹಿಡಿಯಲು ಹೋಗಿ ಸಚಿವರೇ ಪ್ರಾಣ ಕಳೆದುಕೊಂಡಿದ್ದಾರೆ. ಆ ಕ್ಯಾಮರಾಮನ್ ಕೂಡ ಬದುಕಲಿಲ್ಲ ಅಂತ ರಷ್ಯನ್ ಟಿವಿ ಚಾನಲ್ RT ವರದಿ ಮಾಡಿದೆ. ಆರ್ಕ್ಟಿಕ್ ಪ್ರದೇಶದಲ್ಲಿ ಯಾವಾಗ ಬೇಕಾದ್ರು ಶತ್ರುಗಳು ಎದುರಾಗಬೋದು. ಹೀಗಾಗಿ ನೀವೆಲ್ಲ ಅಲ್ಲಿ ಹೋಗಿ ದೊಡ್ಡ ಪ್ರಮಾಣದ ಒಂದು ಡ್ರಿಲ್ ನಡೆಸಿ ಅಂತ ಖುದ್ದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶ ನೀಡಿದ್ದರು ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply