ರಷ್ಯಾ ಲಸಿಕೆ ಅಲ್ಲ! ಇಂಡಿಯನ್-ರಷ್ಯನ್ ಲಸಿಕೆ ಅಂತೆ!

masthmagaa.com:

ಸ್ಪುಟ್ನಿಕ್ ವಿ ಲಸಿಕೆ ಸಂಬಂಧ ಇವತ್ತು ರಷ್ಯಾದ ಭಾರತ ರಾಯಭಾರಿ ಎನ್ ಕುಡಾಶೆವ್ ಸುದ್ದಿಗೋಷ್ಟಿ ನಡೆಸಿದ್ರು. ಸ್ಪುಟ್ನಿಕ್ ವಿ ಕೇವಲ ರಷ್ಯನ್ ಲಸಿಕೆ ಅಲ್ಲ. ಇದು ರಷ್ಯನ್-ಇಂಡಿಯನ್ ಲಸಿಕೆ ಅಂದ್ರು. ಆದಷ್ಟು ಬೇಗ ಭಾರತದಲ್ಲೇ ವರ್ಷಕ್ಕೆ 85 ಕೋಟಿ ಡೋಸ್ ಲಸಿಕೆ ಉತ್ಪಾದಿಸೋ ಗುರಿ ನಮಗೆ ಇದೆ ಅಂತ ಹೇಳಿದ್ರು. ಜೊತೆಗೆ ಲಸಿಕೆಯ ಸಿಂಗಲ್ ಡೋಸ್ ವರ್ಷನ್ ಸ್ಪುಟ್ನಿಕ್ ವಿ ಲೈಟ್ ಅನ್ನ ಕೂಡ ಶೀಘ್ರದಲ್ಲೇ ಭಾರತದಲ್ಲಿ ಇಂಟ್ರಡ್ಯೂಸ್ ಮಾಡುವ ಪ್ಲಾನ್ ಇದೆ ಅಂತಾನೂ ರಷ್ಯಾ ರಾಯಭಾರಿಉ ಕುಡಾಶೇವ್ ಹೇಳಿದ್ರು. ಜೊತೆಗೆ ನಮ್ಮ ಲಸಿಕೆ ಸೇಫ್ ಅಂತ ಈಗಾಗಲೇ ಸಾಬೀತಾಗಿದೆ. 2020ರ ಮಧ್ಯಭಾಗದಿಂದಲೂ ಇದನ್ನ ರಷ್ಯಾ ಜನತೆಗೂ ಇದನ್ನೇ ಹಾಕಲಾಗ್ತಿದೆ. ಇದು ರೂಪಾಂತರಿ ವೈರಾಣುಗಳ ವಿರುದ್ಧವೂ ಚೆನ್ನಾಗಿ ಕೆಲಸ ಮಾಡುತ್ತೆ ಅಂತ ಹೇಳಿದ್ದಾರೆ. ಈ ನಡುವೆ 2ನೇ ಹಂತದ ರಷ್ಯಾ ಸ್ಪುಟ್ನಿಕ್‌ ವಿ ಲಸಿಕೆ ಹೈದರಬಾದ್‌ ತಲುಪಿದೆ.

-masthmagaa.com

Contact Us for Advertisement

Leave a Reply