ಯುಕ್ರೇನ್​ನ ಮತ್ತೊಂದು ಪರಮಾಣು ಘಟಕ ಮೇಲೆ ಅಟ್ಯಾಕ್​!

masthmagaa.com:

ಯುಕ್ರೇನ್​-ರಷ್ಯಾ ಬಡಿದಾಟದಲ್ಲಿ ನ್ಯೂಕ್ಲಿಯರ್ ಪ್ಲಾಂಟ್​ಗಳಿಗೆ ಹಾನಿಯಾಗಿ, ದೊಡ್ಡ ದುರಂತಕ್ಕೆ ಏನಾದ್ರೂ ಆಹ್ವಾನ ಕೊಡ್ತಾರಾ ಅನ್ನೋ ಆತಂಕ ಹೆಚ್ಚಾಗ್ತಿದೆ. ಯಾಕಂದ್ರೆ ಯುದ್ಧದಲ್ಲಿ ಯುಕ್ರೇನ್​ನ ಎರಡನೇ ಪರಮಾಣು ಸಂಸ್ಥೆಗೆ ಡ್ಯಾಮೇಜ್​ ಆಗಿದೆ ಅಂತ ಇಂಟರ್​ನ್ಯಾಷನಲ್​ ಆಟೊಮಿಕ್​ ಎನರ್ಜಿ ಏಜೆನ್ಸಿ ಹೇಳಿದೆ. ಖಾರ್ಕಿವ್​ ನಗರದಲ್ಲಿ ವೈದ್ಯಕೀಯ ಮತ್ತು ಕೈಗಾರಿಕಾ ಉದ್ದೇಶಕ್ಕೆ ರೇಡಿಯೋಐಸೋಟೋಪ್​​ಗಳನ್ನ ಉತ್ಪಾದಿಸುತ್ತಿದ್ದ Kharkiv Institute of Physics and Technology ಹಾನಿಯಾಗಿದೆ. ಅದೃಷ್ಟವಶಾತ್ ಘಟಕದಲ್ಲಿದ್ದ ರೇಡಿಯೋಆ್ಯಕ್ಟಿವ್ ಮೆಟೀರಿಯಲ್​ ಪ್ರಮಾಣ ಕಮ್ಮಿ ಇದ್ದಿದ್ದರಿಂದ​ ರೇಡಿಯೇಷನ್​ ಲೆವೆಲ್​ ಏರಿಕೆ ಕಂಡಿಲ್ಲ ಅಂತ ಇಂಟರ್​ನ್ಯಾಷನಲ್​ ಆಟೊಮಿಕ್​ ಎನರ್ಜಿ ಏಜೆನ್ಸಿ ಹೇಳಿದೆ. ಈ ಹಿಂದೆ ಯುರೋಪ್​ನ ಅತಿದೊಡ್ಡ ಪರಮಾಣು ಘಟಕವಾಗಿದ್ದ ಝಪೊರಿಝಿಯಾ ಮೇಲೆಯೂ ದಾಳಿ ನಡೆದಿತ್ತು. ಅಲ್ಲದೆ ಶಾಶ್ವತವಾಗಿ ಬಂದ್​ ಆಗಿರೋ ಚೆರ್ನೊಬಿಲ್ ನ್ಯೂಕ್ಲಿಯರ್ ಪ್ಲಾಂಟ್​ ಕೂಡ ರಷ್ಯಾ ಸೇನೆಯ ಕಂಟ್ರೋಲ್​​ನಲ್ಲಿದೆ. ಅಲ್ಲಿ ಕೆಲಸ ಮಾಡ್ತಿರೋ ಸಿಬ್ಬಂದಿಯನ್ನ ಹೊರಗೆ ಹೋಗೋಕೂ ಬಿಡ್ತಿಲ್ಲ ರಷ್ಯಾ ಸೇನೆ. ಅವರು ಹೊರಗೆ ಬರದೇ 13 ಆಯ್ತು. ಅವರಿಗೆ ಸರಿಯಾದ ಆಹಾರ ಕೂಡ ಕೊಡ್ತಿಲ್ಲ ಅನ್ನೋ ಆರೋಪ ಇದೆ. ಅಲ್ಲಿ ನಿಯೋಜನೆಗೊಂಡಿದ್ದ ಸುಮಾರು 200 ಯುಕ್ರೇನ್​ ಗಾರ್ಡ್ಸ್​ ಕೂಡ ರಷ್ಯಾ ವಶದಲ್ಲಿದ್ದಾರೆ. ಆದ್ರೆ ರಷ್ಯಾ ಮಾತ್ರ ನಾವು ಮತ್ತು ಯುಕ್ರೇನ್​ ಗಾರ್ಡ್ಸ್​ ಇಬ್ಬರೂ ಜಂಟಿಯಾಗಿ ಚೆರ್ನೋಬಿಲ್​ ಸೈಟ್​ಗೆ ರಕ್ಷಣೆ ಕೊಡ್ತಿದ್ದೀವಿ ಅಂತೇಳ್ತಿದೆ.

-masthmagaa.com

Contact Us for Advertisement

Leave a Reply