ಭೂಮಿಗೆ ಬಂದಪ್ಪಳಿಸುತ್ತಾ ರಷ್ಯಾದ ರಾಕೆಟ್?

masthmagaa.com:

ರಷ್ಯಾ ಇತ್ತೀಚೆಗಷ್ಟೇ ಮಿಲಿಟರಿ ಉಪಗ್ರಹವೊಂದನ್ನು ಉಡಾವಣೆ ಮಾಡಿ, ಯಶಸ್ವಿಯಾಗಿದೆ ಅಂತ ಹೇಳಿಕೊಂಡಿತ್ತು. ಆದ್ರೀಗ ಈ ಉಪಗ್ರಹ ಉಡಾವಣೆಯಲ್ಲಿ ಎಡವಟ್ಟಾಗಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಆ ಉಪಗ್ರಹ ಮತ್ತು ರಾಕೆಟ್​​​ ಭೂಮಿಗೆ ಬಂದು ಅಪ್ಪಳಿಸಲಿದೆ ಅಂತ ತಜ್ಞರು ಎಚ್ಚರಿಸಿದ್ದಾರೆ. ಇದು ಹೊಸ ತಲೆಮಾರಿನ ಬೇಹುಗಾರಿಕಾ ಉಪಗ್ರಹವಾಗಿದ್ದು, ಸೋಮವಾರ ರಾಕೆಟ್ ಅಂಗಾರ ಎ-5 ಮೂಲಕ ರಷ್ಯಾ ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಇದ್ರ ತೂಕ ಸುಮಾರು 20 ಟನ್​ನಷ್ಟಿದ್ದು, ಭೂಮಿಗೆ ಅಪ್ಪಳಿಸಿದ್ರೆ ದೊಡ್ಡ ಅಪಾಯ ಎದುರಾಗಬಹುದು ಅನ್ನೋದು ತಜ್ಞರ ಅಭಿಪ್ರಾಯ. ರಷ್ಯಾದ ಗೂಢಾಚಾರಿ ಉಪಗ್ರಹಗಳು, ಶಸ್ತ್ರಾಸ್ತ್ರ ಮತ್ತು ನೇವಿಗೇಷನ್​​ಗೆ ಅಗತ್ಯವಾದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅಂಗಾರಾ ಎ-5 ರಾಕೆಟ್ ತುಂಬಾ ಮುಖ್ಯವಾಗಿದೆ. ಇದೇ ಭಾರಿ ಗಾತ್ರದ ರಾಕೆಟ್ ಮೂಲಕ ಚಂದ್ರಯಾನ ಕೈಗೊಳ್ಳುವ ಕನಸನ್ನು ಸಾಕಾರಗೊಳಿಸೋ ಬಗ್ಗೆ ರಷ್ಯಾ ಪ್ಲಾನ್ ಮಾಡ್ತಿದೆ. ಆದ್ರೆ ಈ ರಾಕೆಟ್ ಈಗ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲವಾಗಿದೆ. ಹೀಗಾಗಿ ವಾಪಸ್ ಭೂಮಿಗೆ ಬಂದಪ್ಪಳಿಸೋ ಅಪಾಯ ಎದುರಾಗಿದೆ. ಆದ್ರೆ ಈ ಬಗ್ಗೆ ರಷ್ಯಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತೀಚೆಗೆ ಚೀನಾದ ಲಾಂಗ್​ಮಾರ್ಚ್​ ರಾಕೆಟ್ ಕೂಡ ಇದೇ ರೀತಿಯಾಗಿತ್ತು. 21 ಟನ್ ತೂಕ ಇದ್ದ ರಾಕೆಟ್ ನಿಯಂತ್ರಣ ಕಳ್ಕೊಂಡಿತ್ತು. ಆದ್ರೆ ಪುಣ್ಯಕ್ಕೆ ಅದು ಬಂದು ಸಮುದ್ರಕ್ಕೆ ಅಪ್ಪಳಿಸಿತ್ತು. ಯಾರಿಗೂ ಯಾವುದೇ ಹಾನಿಯಾಗಿರಲಿಲ್ಲ.. ಇದೀಗ ಅದೇ ರೀತಿಯ ಮತ್ತೊಂದು ಅಪಾಯ ಎದುರಾಗಿದೆ.

-masthmagaa.com

Contact Us for Advertisement

Leave a Reply